* ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಅಮೃತ್ ಭಾರತ್ ಎಕ್ಸ್ ಪ್ರೆಸ್ ಗೆ ಚಾಲನೆ ನೀಡಿದ್ದಾರೆ.
* ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಒಟ್ಟು ಎಂಟು ಹೊಸ ರೈಲುಗಳಿಗೆ ಚಾಲನೆ ನೀಡಿದರು. ಇವುಗಳಲ್ಲಿ ಎರಡು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಮತ್ತು ಆರು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗಳು ಸೇರಿವೆ.
* ಪ್ರಧಾನ ನಗರಗಳನ್ನು ಜೋಡಿಸುವ ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮಡಗಾಂವ್ ಗೆ ಡಿಸೆಂಬರ್ 30 ರಂದು 12.12ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಪ್ರಥಮ ಪ್ರಯಾಣ ಆರಂಭಿಸಿದೆ.
* ಅಮೃತ್ ಭಾರತ್ ಎಕ್ಸ್‌ಪ್ರೆಸ್ ಅಭಿವೃದ್ಧಿಪಡಿಸಬೇಕಾದರೆ ಆರಂಭಿಕ ಹಂತದಲ್ಲಿ ವಂದೇ ಸುಧಾರಣ್ ಎಂದು ಹೆಸರಿಸಲಾಗಿತ್ತು. ಬಳಿಕ ಇದನ್ನು ಅಮೃತ್ ಭಾರತ್ ಎಕ್ಸ್‌ಪ್ರೆಸ್ ಎಂದು ಕರೆಯಲಾಯಿತು.
* ಅಮೃತ್ ಭಾರತ್ ಎಕ್ಸ್‌ಪ್ರೆಸ್ ಕಿತ್ತಳೆ- ಬೂದು ಬಣ್ಣದಿಂದ ಕೂಡಿರುವ ಈ ರೈಲು ಗಂಟೆಗೆ 130 ಕಿಲೋ ಮೀಟರ್ ಕ್ರಮಿಸಲಿದೆ. ಅಮೃತ್ ಭಾರತ್ ಎಕ್ ಪ್ರೆಸ್ ಭಾರತದಾದ್ಯಂತ ಸಾಂಸ್ಕೃತಿಕವಾಗಿ ಪ್ರ ಮಹತ್ವದ ಸ್ಥಳಗಳನ್ನು ಸಂಪರ್ಕಿಸುತ್ತದೆ.
* ಮೊದಲನೆ ರೈಲು ಅಯೋಧ್ಯೆಯಿಂದ ಬಿಹಾರದ ದರ್ಭಾಂಗ ನಡುವೆ ಸಂಚರಿಸಲಿದೆ. ಎರಡನೆಯ ಎಕ್ಸ್‌ಪ್ರೆಸ್, ಪಶ್ಚಿಮ ಬಂಗಾಳದ ಮಾಲ್ಡಾದಿಂದ ಬೆಂಗಳೂರಿಗೆ ಪಯಣಿಸಲಿದೆ. ವಿಶೇಷವಾಗಿ ಎರಡನೇ ವರ್ಜೆಯ ಪ್ರಯಾಣಿಕರಿಗೆ ಮತ್ತು ವಲಸೆ ಕಾರ್ಮಿಕರಿಗಾಗಿ ವಿನ್ಯಾಸ ಮಾಡಲಾಗಿದೆ.
ಮಂಗಳವಾರ, 02 ಜನವರಿ 2024
4:10 ಅಪರಾಹ್ನ
Daily PDF
ಅಮೃತ್ ಭಾರತ್ ಎಕ್ಸ್ ಪ್ರೆಸ್ ಗೆ ಚಾಲನೆ
Authored by:
Bhagya R K