* ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಉತ್ಪನ್ನಗಳ ಮೇಲೆ ಶೇ.10ರಷ್ಟು ಸುಂಕ ವಿಧಿಸಿದ್ದ ಬೆನ್ನಲ್ಲೇ ತಿರುಗೇಟು ಎಂಬಂತೆ ಅಮೆರಿಕದ ಕಲ್ಲಿದ್ದಲು, ಅನಿಲ ಆಮದಿನ ಮೇಲೆ ಶೇ.15ರಷ್ಟು ಸುಂಕ ವಿಧಿಸಿದೆ.
* ಕಚ್ಚಾ ತೈಲ,ಶಸ್ತ್ರಾಸ್ತ್ರ ಉಪಕರಣಗಳು ಸೇರಿ ಹಲವು ಉತ್ಪನ್ನಗಳ ಮೇಲೆ ಶೇ.10ರಷ್ಟು ತೆರಿಗೆ ವಿಧಿಸುವುದಾಗಿ ಚೀನಾ ಆದೇಶಹೊರಡಿಸಿದೆ.ಫೆಬ್ರುವರಿ 10 ರಿಂದ ಈ ಹೊಸ ನೀತಿ ಅನ್ವಯವಾಗಲಿದೆ ಎಂದು ಚೀನಾ ಹಣಕಾಸು ಸಚಿವಾಲಯ ಹೇಳಿದೆ.
* ಗೂಗಲ್ ವಿರುದ್ಧ ತನಿಖೆ ನಡೆಸುವುದಾಗಿ ಚೀನಾ ಘೋಷಿಸಿದೆ. ಇದರೊಂದಿಗೆ ವಿಶ್ವದ ಎರಡು ಬೃಹತ್ ಆರ್ಥಿಕತೆ ದೇಶಗಳ ನಡುವಿನ ವ್ಯಾಪಾರ ಯುದ್ಧಕ್ಕೆ ನಾಂದಿ ಹಾಡಿದೆ.
* ಅಮೆರಿಕದ ಏಕಪಕ್ಷೀಯ ಸುಂಕ ಹೇರಿಕೆಯು ವಿಶ್ವ ವ್ಯಾಪಾರ ಸಂಘಟನೆಯ(WTO) ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಚೀನಾದ ಹಣಕಾಸು ಸಚಿವಾಲಯ ಬಿಡುಗಡೆಗೊಳಿಸಿರುವ ಪ್ರಕಟನೆಯಲ್ಲಿ ಆರೋಪಿಸಿದೆ.
* ಅಮೆರಿಕದ ಬ್ರಾಂಡೆಡ್ ಬಟ್ಟೆಗಳ ಕಂಪನಿ 'ಕೆಲ್ವಿನ್ ಕ್ಲೀನ್' ಮತ್ತು ಅಮೆರಿಕದ ಜೈವಿಕ ತಂತ್ರಜ್ಞಾನ ಕಂಪನಿ 'ಇಲ್ಯುಮಿನಾ'ವನ್ನು ವಿಶ್ವಾಸಾರ್ಹವಲ್ಲದ ಘಟಕಗಳ ಪಟ್ಟಿಗೆ ಸೇರಿಸುವುದಾಗಿ ಚೀನಾ ತಿಳಿಸಿದೆ.
* ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೆಕ್ಸಿಕೊ ಅಧ್ಯಕ್ಷ ಕೌಡಿಯಾ ಶಿನ್ಹಾಮ್ ನಡುವಿನ ಮಾತುಕತೆಯ ಬಳಿಕ, ಮೆಕ್ಸಿಕೊ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸುವ ಆದೇಶವನ್ನು ಒಂದು ತಿಂಗಳು ತಡೆಹಿಡಿಯಲಾಗಿದೆ. ಗಡಿಯುದ್ದಕ್ಕೂ ಮಾದಕ ದ್ರವ್ಯ ಕಳ್ಳಸಾಗಣೆ ತಡೆಯಲು ಕಠಿಣ ಕ್ರಮ ಕೈಗೊಳ್ಳಲು ನಿರ್ಧಾರವಾಗಿದೆ ಎಂದು ಶಿನ್ಹಾಮ್ ತಿಳಿಸಿದ್ದಾರೆ.
ಅಮೆರಿಕಕ್ಕೆ ಚೀನಾ ತಿರುಗೇಟು : ಉತ್ಪನ್ನಗಳ ಮೇಲೆ ಶೇ.15ರಷ್ಟು ಸುಂಕ
Published by Jyoti Angadi
05 ಫೆಬ್ರವರಿ 2025