* ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರು ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ಸಹಾಯಕ ಅಟಾರ್ನಿ ಜನರಲ್ [Assistant Attorney General for Civil Rights at the Department of Justice] ಆಗಿ ಭಾರತ ಮೂಲದ ಹರ್ಮಿತ್ ಕೆ.ಧಿಲ್ಲೋನ್ ಅವರನ್ನು ನೇಮಿಸಿದ್ದಾರೆ.
* ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ನಲ್ಲಿ ನಾಗರಿಕ ಹಕ್ಕುಗಳಿಗಾಗಿ ಸಹಾಯಕ ಅಟಾರ್ನಿ ಜನರಲ್ ಆಗಿ ಹರ್ಮೀತ್ ಕೆ ಧಿಲ್ಲೋನ್ ಅವರನ್ನು ನಾಮನಿರ್ದೇಶನ ಮಾಡಿದೆ.
* ಚಂಡೀಗಢದಲ್ಲಿ ಜನಿಸಿದ ಧಿಲ್ಲೋನ್ ಅವರು ಬಾಲ್ಯದಲ್ಲೇ ಹೆತ್ತವರ ಜೊತೆ ಅಮೆರಿಕಕ್ಕೆ ಹೋಗಿ ಅಲ್ಲಿಯೇ ನೆಲೆಸಿದ್ದಾರೆ.
* 2016ರಲ್ಲಿ ಕ್ಲೀವ್ಲ್ಯಾಂಡ್ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದ ವೇಳೆ ವೇದಿಕೆ ಹತ್ತಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಗೌರವಕ್ಕೂ ಪಾತ್ರರಾಗಿದ್ದರು.
* 2006 ರಲ್ಲಿ ಅವರು ತಮ್ಮ ಕಾನೂನು ಸಂಸ್ಥೆಯಾದ ಧಿಲ್ಲೋನ್ ಲಾ ಗ್ರೂಪ್ ಇಂಕ್ ಅನ್ನು ಸ್ಥಾಪಿಸಿದರು.
* ವಾಣಿಜ್ಯ ದಾವೆ, ಉದ್ಯೋಗ ಕಾನೂನು, ಮೊದಲ ತಿದ್ದುಪಡಿ ಹಕ್ಕುಗಳು ಮತ್ತು ಚುನಾವಣಾ ಕಾನೂನಿನಲ್ಲಿ ಪರಿಣತಿ ಹೊಂದಿದ್ದರು. ಅವರು ಸೆಂಟರ್ ಫಾರ್ ಅಮೇರಿಕನ್ ಲಿಬರ್ಟಿಯ ಸಿಇಒ ಕೂಡ ಆಗಿದ್ದಾರೆ.
* "ತಮ್ಮ ವೃತ್ತಿಜೀವನದುದ್ದಕ್ಕೂ, ಹರ್ಮೀತ್ ಧಿಲ್ಲೊನ್ ಅವರು ನಾಗರಿಕ ಹಕ್ಕುಗಳ ರಕ್ಷಣೆ, ವಾಕ್ ಸ್ವಾತಂತ್ರ್ಯ, ಉದ್ದೋಗದ ಸ್ಥಳದಲ್ಲಿ ತಾರತಮ್ಯ ನಿವಾರಣೆಗಾಗಿ ಹೋರಾಟ ನಡೆಸಿದ್ದರು.
ಅಮೆರಿಕದ ಮಾನವಹಕ್ಕುಗಳ ಸಹಾಯಕ ಅಟಾರ್ನಿ ಜನರಲ್ ಆಗಿ ಭಾರತ ಮೂಲದ ಹರ್ಮಿತ್ ಧಿಲ್ಲೋನ್ ನೇಮಕ
Published by Akshata Halli
11 ಡಿಸೆಂಬರ್ 2024