* ಅಮೆರಿಕ ಮತ್ತು ಭಾರತ ಶೀಘ್ರದಲ್ಲೇ ಶಕ್ತಿಶಾಲಿ 'ಎಂಕ್ಯೂ-98' ಪ್ರಿಡೇಟರ್ ಡೋನ್‌ಗಳ ಖರೀದಿ ಒಪ್ಪಂದಕ್ಕೆ ಸಹಿ ಮಾಡಲಿದ್ದು, 31 ಸಶಸ್ತ್ರ ಡೋನ್‌ಗಳ ಖರೀದಿಗೆ ಸಂಬಂಧಿಸಿ 2024ರ ಮಾರ್ಚ್ ವೇಳೆಗೆ ಉಭಯ ರಾಷ್ಟ್ರಗಳು ಒಪ್ಪಂದ ಮಾಡಿಕೊಳ್ಳಲಿವೆ.
* ಸಂಬಂಧಿಸಿದ ಪ್ರಕ್ರಿಯೆಗಳಿಗೆ ಮುಂದಿನ ಕೆಲ ವಾರಗಳಲ್ಲಿ ಅಮೆರಿಕ ಸಂಸತ್ತು ಅಧಿಕೃತ ಮುದ್ರೆ ಒತ್ತುವ ನಿರೀಕ್ಷೆ ಇದೆ.
* ರಕ್ಷಣಾ ಸಾಮಗ್ರಿಗಳನ್ನು ತಯಾರಿಸುವ ಅಮೆರಿಕದ ಜನರಲ್ ಅಟೊಮಿಕ್ಸ್ (GA) ಕಂಪನಿಯು ಈ ಅತ್ಯಾಧುನಿಕ ಡೋನ್‌ಗಳನ್ನು ಪೂರೈಕೆ ಮಾಡಲಿದೆ. ಬಹಳ ಎತ್ತರದಲ್ಲಿ 35 ಗಂಟೆಗಳಿಗೂ ಹೆಚ್ಚು ಕಾಲ ಹಾರಾಡಬಲ್ಲ ಈ ಡೋನ್‌ಗಳು, 4 'ಹೆಲ್‌ಫೈರ್' ಕ್ಷಿಪಣಿಗಳು ಹಾಗೂ ಅಂದಾಜು 450 ಕೆ.ಜಿ ತೂಕದ ಬಾಂಬ್‌ಗಳನ್ನು ಹೊರುವ ಸಾಮರ್ಥ್ಯ ಹೊಂದಿವೆ.
ಗುರುವಾರ, 30 ನವೆಂಬರ್ 2023
10:25 ಪೂರ್ವಾಹ್ನ
Daily PDF
ಅಮೆರಿಕ ಮತ್ತು ಭಾರತ ಡೋನ್ ಖರೀದಿ ಒಪ್ಪಂದ
Authored by:
Akshata Halli