* ಸೆರೆಬ್ರಲ್ ಪಾಲ್ಸಿ ಕಾಯಿಲೆಯಿಂದ ಬಳಲುತ್ತಿರುವ ಜನರ ಜೀವನ ಮತ್ತು ಸಾಧನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಲು, ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 6 ರಂದು ವಿಶ್ವ ಸೆರೆಬ್ರಲ್ ಪಾಲ್ಸಿ ದಿನವನ್ನು ಆಚರಿಸಲಾಗುತ್ತದೆ.
* ವಿಶ್ವ ಸೆರೆಬ್ರಲ್ ಪಾಲ್ಸಿ ದಿನದ 2024 ರ ಥೀಮ್ "ಉಜ್ವಲ ಭವಿಷ್ಯಕ್ಕಾಗಿ ಕ್ರಮ (Taking Action for a Brighter Future) ಎಂಬುದು ಥೀಮ್ ಆಗಿದೆ.
* ಸೆರೆಬ್ರಲ್ ಪಾಲ್ಸಿ ಅಲಯನ್ಸ್ 2012ರ ಅಕ್ಟೋಬರ್ 6ರಂದು ಮೊತ್ತಮೊದಲ ಬಾರಿಗೆ ವಿಶ್ವ ಸೆರೆಬ್ರಲ್ ಪಾಲ್ಸಿ ದಿನವನ್ನು ಘೋಷಿಸಿತು.
* ಪ್ರಪಂಚದಲ್ಲಿ ಬದುಕುತ್ತಿರುವ ಇತರ ಜನರಂತೆ - ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವವರಿಗೂ ಸಮಾನ ಹಕ್ಕು, ಅವಕಾಶಗಳನ್ನು ನೀಡಬೇಕು ಎಂದು ಪ್ರತಿಪಾದಿಸುವುದು ಈ ದಿನದ ಉದ್ದೇಶವಾಗಿತ್ತು.
* ಸೆರೆಬ್ರಲ್ ಪಾಲ್ಸಿ ನರಮಂಡಲಕ್ಕೆ ಸಂಬಂಧಿತ ಖಾಯಿಲೆಯಾಗಿದ್ದು, ಮಗುವಿನ ಮಿದುಳು ಅಭಿವೃದ್ಧಿ ಹಂತದಲ್ಲಿರುವಾಗ ಆಗುವ ಗಾಯ ಅಥವಾ ಮಿದುಳಿನ ಅಸಮರ್ಪಕ ರಚನೆಯಿಂದ ಉಂಟಾಗುತ್ತದೆ.
* ದೇಹದ ಚಲನೆ, ಮಾಂಸಖಂಡದ ನಿಯಂತ್ರಣ ಮತ್ತು ಸಂರಚನೆ, ಮತ್ತು ದೇಹದ ಭಾಗಗಳ ಸಮತೋಲನದ ಮೇಲೆ ಇದು ಪರಿಣಾಮ ಬೀರುತ್ತದೆ. ಬಾಲ್ಯದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ದೀರ್ಘಕಾಲದ ಅಸ್ವಸ್ಥತೆಗಳಲ್ಲಿ ಇದೂ ಒಂದಾಗಿದೆ.
* ಸೆರೆಬ್ರಲ್ ಪಾಲ್ಸಿ ಮೂರು ವಿಧಗಳಲ್ಲಿ ಭಿನ್ನವಾಗಿದೆ: ಕ್ವಾಡ್ರಿಪ್ಲೆಜಿಯಾ (ಎರಡೂ ತೋಳುಗಳು ಮತ್ತು ಕಾಲುಗಳು ಬಾಧಿತವಾಗಿವೆ), ಡಿಪ್ಲೆಜಿಯಾ (ಎರಡೂ ಕಾಲುಗಳು ಬಾಧಿತವಾಗಿವೆ), ಮತ್ತು ಹೆಮಿಪ್ಲೆಜಿಯಾ (ದೇಹದ ಒಂದು ಭಾಗವು ಪರಿಣಾಮ ಬೀರುತ್ತದೆ ಅಂದರೆ ಒಂದು ತೋಳು ಮತ್ತು ಒಂದು ಕಾಲಿನ ಮೇಲೆ ಪರಿಣಾಮ ಬೀರುತ್ತದೆ).
ಸೋಮವಾರ, 07 ಅಕ್ಟೋಬರ್ 2024
11:52 ಪೂರ್ವಾಹ್ನ
Daily PDF
ಅಕ್ಟೋಬರ್ 6 : ವಿಶ್ವ ಸೆರೆಬ್ರಲ್ ಪಾಲ್ಸಿ ದಿನ
Authored by:
Bhagya R K