* ಭಾರತದ ಅತಿ ದೊಡ್ಡ ಕಡಲ ತೀರಗಳಲ್ಲೊಂದಾದ ಮರೀನಾ ಬೀಚ್ ಪಕ್ಕದಲ್ಲೇ ಇರುವ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದ  ಕೋಲ್ಕತ್ತ ನೈಟ್ ರೈಡರ್ಸ್ 2024ರ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
* 2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್‌ ಅವರ ನಾಯಕತ್ವದಲ್ಲಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ 10 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ಅವರ ನಾಯಕತ್ವದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.
* ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಸರ್ವಪತನ ಕಂಡಿತ್ತು. ಅಲ್ಪ ಮೊತ್ತ ಗುರಿ ಪಡೆದ ಕೆಕೆಆರ್‌ ಕೇವಲ 10.3 ಓವರ್‌ಗಳಲ್ಲೇ 114 ರನ್‌ ಗಳಿಸಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. 
* ಐಪಿಎಲ್‌ ಫೈನಲ್ ಇತಿಹಾಸದ ಅತ್ಯಂತ ಕಡಿಮೆ ಮೊತ್ತದ ದಾಖಲೆ ಇದಾಗಿದೆ. ಇದಕ್ಕೂ ಮೊದಲು 2013ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮುಂಬೈ ಇಂಡಿಯನ್ಸ್‌ ಎದುರು 129/9 ರನ್‌ ಗಳಿಸಿದ್ದು ಅತ್ಯಂತ ಕಡಿಮೆ ಮೊತ್ತ ಆಗಿತ್ತು. 
* ಐಪಿಎಲ್​ನಲ್ಲಿ ಟ್ರೋಫಿ ಗೆದ್ದ ಭಾರತದ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಶ್ರೇಯಸ್ ಅಯ್ಯರ್ ಪಾತ್ರರಾಗಿದ್ದಾರೆ. ರೋಹಿತ್​ ಶರ್ಮಾ (5 ಟ್ರೋಫಿ), ಎಂಎಸ್ ಧೋನಿ (5 ಟ್ರೋಫಿ), ಗೌತಮ್ ಗಂಭೀರ್​ (2 ಟ್ರೋಫಿ), ಹಾರ್ದಿಕ್ ಪಾಂಡ್ಯ (1) ಈ ಹಿಂದೆ ಐಪಿಎಲ್ ಟ್ರೋಫಿ ಗೆದ್ದ ಭಾರತೀಯ ನಾಯಕರು.
* 2008-2009ರಲ್ಲಿ ಮೊದಲ ಎರಡು ಸೀಸನ್​​​ನಲ್ಲಿ ವಿಜೇತರಿಗೆ 4.8 ಕೋಟಿ ರೂಪಾಯಿ ನಗದು ಬಹುಮಾನ ಮತ್ತು ರನ್ನರ್​ಅಪ್​ ತಂಡಕ್ಕೆ 2.4 ಕೋಟಿ ನೀಡಲಾಗಿತ್ತು. 
- ಟೂರ್ನಿಯಲ್ಲಿ ದಾಖಲಾದ ಒಟ್ಟು ಸಿಕ್ಸರ್‌ಗಳು 1260
- ಟೂರ್ನಿಯಲ್ಲಿ ದಾಖಲಾದ ಒಟ್ಟು ಬೌಂಡರಿಗಳು 2175
- ಸನ್‌ರೈಸರ್ಸ್ ತಂಡದ ಅಭಿಷೇಕ್ ಶರ್ಮಾ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸ‌ರ್ ಸಿಡಿಸಿದ ಬ್ಯಾಟರ್ ಗಳು 42
- ಕೆಕೆಆರ್‌ನ ಫಿಲ್‌ ಸಾಲ್ಟ್ ಇನಿಂಗ್ಸ್‌ವೊಂದರಲ್ಲಿ ಗಳಿಸಿದ ಬೌಂಡರಿಗಳು 14
- ಆರ್‌ಸಿಬಿಯ ರಜತ್ ಪಾಟೀದಾರ್, ವಿರಾಟ್ ಕೊಹ್ಲಿ ಹಾಗೂ ರಾಜಸ್ಥಾನ ರಾಯಲ್ಸ್‌ನ ಸಂಜು ಸ್ಕಾಟ್ಸನ್ ತಲಾ ಐದು ಅರ್ಧಶತಕ ಗಳಿಸಿದರು.
- ರಾಜಸ್ಥಾನ ರಾಯಲ್ಸ್‌ನ ಜೋಸ್ ಬಟ್ಲರ್ ಈ ಟೂರ್ನಿಯಲ್ಲಿ ಅತಿ ಹೆಚ್ಚು ಶತಕ ಗಳಿಸಿದರು
- ಕೋಲ್ಕತ್ತ ನೈಟ್‌ ರೈಡರ್ಸ್‌ನ ರಮಣದೀಪ್ ಸಿಂಗ್‌ ಅತಿ ಹೆಚ್ಚುಸ್ಟೈಕ್‌ ರೇಟ್ ದಾಖಲಿಸಿದ ಬ್ಯಾಟರ್ 416.68
- 2 ಸನ್‌ ರೈಸರ್ಸ್‌ನ ಭುವನೇಶ್ವರ್ ಕುಮಾರ್ ಮೇಡನ್‌ ಓವರ್‌ಗಳ ದಾಖಲೆ

* ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಗಳು 
ವಿರಾಟ್ ಕೊಹ್ಲಿ (ಆರ್ ಸಿಬಿ) 741 ರನ್ 
ಋತುರಾಜ್‌ ಗಾಯಕವಾಡ(ಸಿಎಸ್‌ಕೆ) 583 ರನ್ 
ರಿಯಾನ್ ಪರಾಗ್(ಆರ್‌ಆರ್) 573 ರನ್ 
ಟ್ರಾವಿಸ್ ಹೆಡ್‌(ಎಸ್‌ಆರ್‌ಎಚ್) 567 ರನ್ 
ಸಂಜು ಸ್ಯಾಮ್ಪನ್(ಆರ್‌ಆ‌ರ್) 527 ರನ್ 

* ಅತಿ ಹೆಚ್ಚು ವಿಕೆಟ್ ಗಳಿಸಿದವರು 
ಹರ್ಷಲ್ ಪಟೇಲ್(ಪಂಜಾಬ್) 24 ವಿಕೆಟ್ 
ವರುಣ ಚಕ್ರವರ್ತಿ (ಕೋಲ್ಕತ್ತ)  21 ವಿಕೆಟ್ 
ಜಿ. ಜಸ್‌ಪ್ರೀತ್ ಬೂಮ್ರಾ (ಮುಂಬೈ)  20 ವಿಕೆಟ್ 
ಟಿ. ನಟರಾಜನ್ (ಹೈದರಾಬಾದ್) 19 ವಿಕೆಟ್ 
ಹರ್ಷಿತ್ ರಾಣಾ(ಕೋಲ್ಕತ್ತ)  19 ವಿಕೆಟ್ 

* ಐಪಿಎಲ್ ಪ್ರಶಸ್ತಿಯ ಮೊತ್ತ 
- ವಿಜೇತರು - 20 ಕೋಟಿ (ಕೋಲ್ಕತ್ತಾ ನೈಟ್ ರೈಡರ್ಸ್)
- ರನ್ನರ್​ಅಪ್​ - 13 ಕೋಟಿ (ಸನ್​ರೈಸರ್ಸ್ ಹೈದರಾಬಾದ್)
- 3ನೇ ಸ್ಥಾನ - 7 ಕೋಟಿ (ರಾಜಸ್ಥಾನ್ ರಾಯಲ್ಸ್)
- 4ನೇ ಸ್ಥಾನ - 6.5 ಕೋಟಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)