➤ ಕೇಂದ್ರ ಆಯುಷ್ ಸಚಿವಾಲಯದ (Ministry of Ayush) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ (AIIA) 2026-27ನೇ ಶೈಕ್ಷಣಿಕ ಸಾಲಿಗಾಗಿ ಆಯುರ್ವೇದ ಆಧಾರಿತ ಗರ್ಭಿಣಿಯರ ಮತ್ತು ತಾಯಂದಿರ ಆರೈಕೆಗೆ ಸಂಬಂಧಿಸಿದ ‘ಗರ್ಭಿಣಿ ಮಿತ್ರ ’ (Garbhini Mitra) ತರಬೇತಿ ಕೋರ್ಸ್ ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಸಮುದಾಯ ಮಟ್ಟದಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ವೈದ್ಯಕೀಯೇತರ (Non-clinical) ಮತ್ತು ಆಯುರ್ವೇದ ಆಧಾರಿತ ಆರೈಕೆ ಮಾರ್ಗದರ್ಶನ ನೀಡುವ ತರಬೇತುದಾರರನ್ನು ಸಿದ್ಧಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಕೋರ್ಸ್‌ನ ಪ್ರಮುಖ ಅಂಶಗಳು:

  • ಸಂಸ್ಥೆ: ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ (AIIA), ನವದೆಹಲಿ.
  • ಸಚಿವಾಲಯ: ಕೇಂದ್ರ ಆಯುಷ್ ಸಚಿವಾಲಯ (Ministry of Ayush).
  • ಅವಧಿ ಮತ್ತು ಸ್ವರೂಪ: 6 ತಿಂಗಳ ಆಫ್‌ಲೈನ್ ತರಬೇತಿ ಕಾರ್ಯಕ್ರಮ.
  • ಅರ್ಹತೆ: 12ನೇ ತರಗತಿ (10+2) ಉತ್ತೀರ್ಣರಾಗಿರಬೇಕು ಮತ್ತು 18 ವರ್ಷ ಮೇಲ್ಪಟ್ಟಿರಬೇಕು.
  • ಸೀಟುಗಳ ಸಂಖ್ಯೆ: ಪ್ರತಿ ಬ್ಯಾಚ್‌ಗೆ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.

ಆಯುರ್ವೇದದ 3 ಪ್ರಮುಖ ಸಿದ್ಧಾಂತಗಳು:

  • ಗರ್ಭಧಾನ ವಿಧಿ (Garbhadhana Vidhi): ಗರ್ಭಧಾರಣೆಗೂ ಮುನ್ನ (Pre-conceptional care) ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಮತ್ತು ಆರೈಕೆ.
  • ಗರ್ಭಿಣಿ ಪರಿಚರ್ಯ (Garbhini Paricharya): ಗರ್ಭಾವಸ್ಥೆಯ ಅವಧಿಯಲ್ಲಿ (Antenatal care/Pregnancy care) ಅನುಸರಿಸಬೇಕಾದ ಆಹಾರ, ಯೋಗ ಮತ್ತು ಜಾಗರೂಕತೆ.
  • ಸೂತಿಕಾ ಪರಿಚರ್ಯ (Sutika Paricharya): ಪ್ರಸವೋತ್ತರ/ಬಾಣಂತನದ ಅವಧಿಯಲ್ಲಿ (Postnatal care) ತಾಯಿ ಮತ್ತು ಮಗುವಿನ ಆರೈಕೆ.

ಪಠ್ಯಕ್ರಮ ಮತ್ತು ನೀಡಲಾಗುವ ತರಬೇತಿ:

  • ಗರ್ಭಾವಸ್ಥೆಯ ತ್ರೈಮಾಸಿಕಗಳಿಗೆ (Trimesters) ಅನುಗುಣವಾಗಿ ಆಯುರ್ವೇದ ಪೋಷಕಾಂಶಯುಕ್ತ ಆಹಾರ ಪದ್ಧತಿ.
  • ಗರ್ಭಿಣಿಯರಿಗೆ ಸುರಕ್ಷಿತವಾದ ಯೋಗ ಮತ್ತು ಪ್ರಾಣಾಯಾಮ.
  • ಮಾನಸಿಕ ಮತ್ತು ಭಾವನಾತ್ಮಕ ಬೆಂಬಲ (Emotional Labour Support).
  • ನವಜಾತ ಶಿಶುವಿನ ಆರೈಕೆ ಮತ್ತು ಮಸಾಜ್ (Newborn Massage).
  • ಮೂಲಭೂತ ಪ್ರಥಮ ಚಿಕಿತ್ಸೆ (Basic Life-Support Protocols) ಹಾಗೂ ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣೆ (Biomedical Waste Management).