* ಬೆಂಗಳೂರು ಮೂಲದ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಮತ್ತು ಏರೋಸ್ಪೇಸ್ (FWDA) ತನ್ನ AI ಚಾಲಿತ ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಎಂಡ್ಯೂರನ್ಸ್ (MALE) ಯುದ್ಧವಿಮಾನ - "FWD ಕಾಲ ಭೈರವ"ವನ್ನು ಬಿಡುಗಡೆ ಮಾಡಿದೆ.
* ಕಾಲಭೈರವನ್ನು 30 ಗಂಟೆಗಳವರೆಗೆ ಹಾರಾಟ ನಡೆಸಬಲ್ಲದು ಮತ್ತು 3000 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.
* FWDA ಸಂಸ್ಥಾಪಕ ಸುಹಾಸ್ ತೇಜಸ್ಕಂದ ಅವರು, ವಿದೇಶಿ ಯುದ್ಧವಿಮಾನಗಳು ಭಾರತಕ್ಕೆ ದುಬಾರಿ ಮತ್ತು ಅಪಾಯಕಾರಿಯಾದ ಡಿಜಿಟಲ್ ಅವಲಂಬನೆ ತರುತ್ತವೆ ಎಂದು ಹೇಳಿದ್ದಾರೆ.
* ಪ್ರಿಡೇಟರ್ ಅಥವಾ ಇಸ್ರೇಲಿ ಸರ್ಚರ್ ಮಾದರಿಗಳಲ್ಲಿ ಬಾಹ್ಯ ಸರ್ವರ್‌ಗಳು ಹಾಗೂ ಎಂಬೆಡೆಡ್ ಕಿಲ್-ಸ್ವಿಚ್ ಹೀಗೆ ತಂತ್ರಜ್ಞಾನ ದುರ್ಬಲತೆಗಳಿವೆ ಎಂದು ಅವರು ಎಚ್ಚರಿಸಿದರು.
* ಕಾಲ ಭೈರವ ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲ್ಪಟ್ಟಿದ್ದು, MQ-9 ರೀಪರ್ ತರದ ಯುದ್ಧವಿಮಾನಗಳಿಗಿಂತ ಕೇವಲ ಹತ್ತನೇ ಭಾಗದ ವೆಚ್ಚದಲ್ಲಿ ಕಾರ್ಯಾಚರಿಸಬಲ್ಲದು. ಇದರಿಂದ ಆತ್ಮನಿರ್ಭರ ಭಾರತ ದೃಷ್ಟಿಕೋನಕ್ಕೆ ಬಲ ದೊರಕುತ್ತದೆ.
* ಈ ವಿಮಾನವು ಸ್ವಯಂಚಾಲಿತ ಸಮೂಹ ದಾಳಿ ಸಾಮರ್ಥ್ಯ, ಬಹು-ಕೋನ ನಿಖರ ದಾಳಿ ಹಾಗೂ ಶತ್ರು ವಾಯು ರಕ್ಷಣಾ ವ್ಯವಸ್ಥೆಗಳನ್ನು ತಡೆಗಟ್ಟುವ ಶಕ್ತಿ ಹೊಂದಿದೆ.
* ಒಂದು ಪ್ರಿಡೇಟರ್ ನಷ್ಟವು ಸಾವಿರ ಕೋಟಿ ರೂ. ವೆಚ್ಚವಾಗಬಹುದಾದರೆ, ಅದೇ ವೆಚ್ಚದಲ್ಲಿ ಕಾಲ ಭೈರವಗಳ ಸಂಪೂರ್ಣ ಪಡೆ ರೂಪಿಸಬಹುದು.
* ಕಾಲ ಭೈರವ ಶೂನ್ಯ ವಿದೇಶಿ ಅವಲಂಬನೆ ಹೊಂದಿದ್ದು, ಎಲ್ಲಾ ತಂತ್ರಜ್ಞಾನವನ್ನು ಸಂಸ್ಥೆಯೇ ಅಭಿವೃದ್ಧಿಪಡಿಸಿದೆ. ಇದು ಸುರಕ್ಷಿತ ಪೂರೈಕೆ ಸರಪಳಿಯನ್ನು ಖಚಿತಪಡಿಸಿ, ದೇಶೀಯ MRO (ಮರಮ್ಮತ್ತು ಮತ್ತು ನಿರ್ವಹಣೆ) ಪರಿಸರ ವ್ಯವಸ್ಥೆ ಒದಗಿಸುತ್ತದೆ.
* FWDA ಹೇಳುವಂತೆ, ಕಾಲ ಭೈರವವು ದುಬಾರಿ ವಿದೇಶಿ ವ್ಯವಸ್ಥೆಗಳಿಗೆ ಪರ್ಯಾಯವಾಗಿದ್ದು, ಭಾರತವನ್ನು ಆಮದುದಾರ ದೇಶದಿಂದ ರಕ್ಷಣಾ ತಂತ್ರಜ್ಞಾನದ ರಫ್ತುದಾರ ರಾಷ್ಟ್ರವನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ.
AI ಚಾಲಿತ "FWD ಕಾಲ ಭೈರವ" ಯುದ್ಧವಿಮಾನ ಬಿಡುಗಡೆ
Published by Jyoti Angadi
23 ಆಗಸ್ಟ್ 2025