* 2025ರ ದಸರಾ ಮಹೋತ್ಸವಕ್ಕಾಗಿ ಅರಣ್ಯ ಇಲಾಖೆ ಮತ್ತೊಮ್ಮೆ 59 ವರ್ಷ ವಯಸ್ಸಿನ ಅಭಿಮನ್ಯು ಆನೆಯನ್ನು ಅಂಬಾರಿ ಹೊರುವ ಮುಖ್ಯ ಆನೆ (ಗಜಪಡೆಯ ನಾಯಕ) ಆಗಿ ಆಯ್ಕೆ ಮಾಡಿದೆ.
* ಅಭಿಮನ್ಯು ಈಗಲೂ ಆರೋಗ್ಯವಾಗಿದ್ದು, ಫಿಟ್ ಅಂಡ್ ಫೈನ್ ಆಗಿರುವುದರಿಂದ ಈ ಬಾರಿಯೂ ಅವನೇ ಅಂಬಾರಿ ಹೊರುತ್ತಾನೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.
* ಅಭಿಮನ್ಯುವಿನೊಂದಿಗೆ ಮಹೇಂದ್ರ, ಧನಂಜಯ, ಏಕಲವ್ಯ ಸೇರಿ ಹಲವು ಆನೆಗಳು ಲೈನ್‌ನಲ್ಲಿವೆ. ವಿಶೇಷವಾಗಿ ಏಕಲವ್ಯನು ಈ ಬಾರಿ ಹೆಚ್ಚು ಧೈರ್ಯ ತೋರಿಸಿದ್ದು, ಭವಿಷ್ಯದಲ್ಲಿ ಉತ್ತಮ ಅಂಬಾರಿ ಆನೆ ಆಗುವ ಸಾಧ್ಯತೆಯಿದೆ.
* ಅಭಿಮನ್ಯು ಈಗ 59 ವರ್ಷದ್ದು. ಕೇಂದ್ರ ಅರಣ್ಯ ಸಚಿವಾಲಯದ ಮಾರ್ಗಸೂಚಿಯ ಪ್ರಕಾರ, 60 ವರ್ಷದ ಮೇಲೆ ಆನೆಗಳಿಗೆ ಭಾರ ಹೊರುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಈ ಬಾರಿ ಅಂಬಾರಿ ಹೊರುವ ಅವಕಾಶವು ಅಭಿಮನ್ಯುವಿಗೆ ಕೊನೆಯದಾಗಬಹುದೆಂಬ ಅನಿಶ್ಚಿತತೆಯೂ ಇದೆ.
* ಆಗಸ್ಟ್ 4ರಂದು ಮೈಸೂರಿಗೆ ಗಜಪಡೆ ಆಗಮಿಸಲಿದೆ. 6 ಕ್ಯಾಂಪುಗಳಿಂದ ಆನೆಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಹೆಣ್ಣು ಆನೆಗಳಿಗೆ ಗರ್ಭಪರೀಕ್ಷೆಯನ್ನೂ ಮಾಡಲಾಗಿದೆ. ಅಂತಿಮವಾಗಿ ದಸರಾ ಹೈಪವರ್ ಕಮಿಟಿ ಆನೆಗಳ ಹೆಲ್ತ್ ಕಾರ್ಡ್ ಪರಿಶೀಲಿಸಿ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಅಭಿಮನ್ಯುವಿಗೆ ಮತ್ತೊಮ್ಮೆ ಅಂಬಾರಿ ಹೊರುವ ಹೊಣೆ
Published by Jyoti Angadi
16 ಜುಲೈ 2025