* ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ತ್ರಿಶತಕ ದಾಖಲಿಸಿದ ಬಾಬ್ ಕೌಪರ್ (84) ಮೇ 11ರಂದು, ರವಿವಾರ ಮೆಲ್ಬರ್ನ್‌ನಲ್ಲಿ ನಿಧನ ಹೊಂದಿದರು. ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
* 1964ರಿಂದ 1968ರ ಅವಧಿಯಲ್ಲಿ ಆಸ್ಟ್ರೇಲಿಯ ಪರವಾಗಿ 27 ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಿದ ಕೌಪರ್ ಅವರು, 46.84ರ ಸರಾಸರಿಯಲ್ಲಿ 2,061 ರನ್ ಗಳಿಸಿದ್ದಾರೆ.
* ಇದರಲ್ಲಿ 5 ಶತಕಗಳೂ ಸೇರಿವೆ. ಪಾರ್ಟ್‌ಟೈಮ್ ಸ್ಪಿನ್ ಬೌಲರ್ ಆಗಿಯೂ ಅವರು 36 ವಿಕೆಟ್ ಗಳಿಸಿದ್ದರು.
* ಎಡಗೈ ಬ್ಯಾಟ್ಸ್ಮನ್ ಆಗಿದ್ದ ಬಾಬ್ ಕೌಪರ್, 1966ರಲ್ಲಿ ಇಂಗ್ಲೆಂಡ್ ವಿರುದ್ಧ ಮೆಲ್ಬರ್ನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ 307 ರನ್ ಬಾರಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 12 ಗಂಟೆಗಳ ಕಾಲ ಕ್ರೀಸ್‌ನಲ್ಲಿ ಉಳಿದ ಅವರು, 589 ಎಸೆತಗಳನ್ನು ಎದುರಿಸಿ 20 ಬೌಂಡರಿಗಳನ್ನು ಬಾರಿಸಿದ್ದರು. ಈ ತ್ರಿಶತಕವು 20ನೇ ಶತಮಾನದಲ್ಲಿ ಆಸ್ಟ್ರೇಲಿಯ ನೆಲದಲ್ಲಿ ದಾಖಲಾಗಿದ ಏಕೈಕ ತ್ರಿಶತಕವಾಗಿತ್ತು.
* ಅಡಿಲೇಡ್‌ನಲ್ಲಿ ನಡೆದಿದ್ದ ಹಿಂದಿನ ಟೆಸ್ಟ್‌ನಲ್ಲಿ 12ನೇ ಆಟಗಾರರಾಗಿದ್ದ ಕೌಪರ್ ಅವರನ್ನು, ತವರಿನಲ್ಲಿ ನಡೆದ ಟೆಸ್ಟ್‌ಗಾಗಿ ಮತ್ತೆ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು.
* ಬಾಬ್ ಕೌಪರ್ ಅವರು ಐಸಿಸಿ ಮ್ಯಾಚ್ ರೆಫ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಮನಗಂಡು, 2023ರಲ್ಲಿ “ಮೆಡಲ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ” ಗೌರವಕ್ಕೆ ಭಾಜನರಾಗಿದ್ದರು.
ಆಸ್ಟ್ರೇಲಿಯಾದ ಮೊದಲ ಟೆಸ್ಟ್ ತ್ರಿಶತಕ ಸಾಧಕ ಬಾಬ್ ಕೌಪರ್ ನಿಧನ
Published by Jyoti Angadi
12 ಮೇ 2025