* ಆಸ್ಟ್ರೇಲಿಯಾ ಸರ್ಕಾರವು ಮಕ್ಕಳ ಆನ್‌ಲೈನ್ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಕಾನೂನನ್ನು ಜಾರಿಗೊಳಿಸಿದ್ದು, ಡಿಸೆಂಬರ್ 10ರಿಂದ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.
* ಈ ನಿಯಮದಂತೆ ಎಲ್ಲಾ ಸಾಮಾಜಿಕ ಮಾಧ್ಯಮ ಕಂಪನಿಗಳು ತಮ್ಮ ಬಳಕೆದಾರರ ವಯಸ್ಸನ್ನು ದೃಢಪಡಿಸಬೇಕಾಗುತ್ತದೆ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಬಳಸುತ್ತಿರುವ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ಥ್ರೆಡ್ಸ್ ಖಾತೆಗಳನ್ನು ಸ್ಥಗಿತಗೊಳಿಸಲು ಮೆಟಾ ಕಂಪನಿಯು ಆರಂಭಿಸಿದೆ.
* ಟಿಕ್‌ಟಾಕ್, ಸ್ನ್ಯಾಪ್‌ಚಾಟ್ ಹಾಗೂ ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಈಗಾಗಲೇ ಸರ್ಕಾರ ಎಚ್ಚರಿಕೆ ನೀಡಿತ್ತು ಮತ್ತು ನಿಯಮ ಪಾಲಿಸದ ಸಂಸ್ಥೆಗಳು ಭಾರೀ ದಂಡಕ್ಕೆ ಒಳಗಾಗಲಿವೆ.
* ಕಳೆದ ನವೆಂಬರ್‌ನಲ್ಲಿ ಅಂಗೀಕರಿಸಲ್ಪಟ್ಟ ಈ ಕಾನೂನು, ಅಪ್ರಾಪ್ತರನ್ನು ಸಾಮಾಜಿಕ ಜಾಲತಾಣಗಳಿಂದ ದೂರವಿಡುವಲ್ಲಿ ವಿಶ್ವದ ಮೊದಲ ಪ್ರಮಾಣಿತ ಕ್ರಮವಾಗಿ ಗಮನ ಸೆಳೆಯುತ್ತಿದೆ. ಯೂಟ್ಯೂಬ್‌ಗೆ ಮಾತ್ರ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ.
ಶುಕ್ರವಾರ, 05 ಡಿಸೆಂಬರ್ 2025
1:11 ಅಪರಾಹ್ನ
Daily PDF
ಆಸ್ಟ್ರೇಲಿಯಾ: ಡಿ.10ರಿಂದ 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆ ಸಂಪೂರ್ಣ ನಿಷೇಧ
Authored by:
Akshata Halli