* ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಕೆಎಲ್ ರಾಹುಲ್ ಪಡೆ 2-1ರಿಂದ ಗೆದ್ದುಕೊಂಡಿದೆ. ಇದೇ ವೇಳೆ ಕೆಎಲ್ ರಾಹುಲ್ ನಾಯಕನಾಗಿ ಮಾದರಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಭಾರತ ಇನ್ನೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಏಕದಿನ ಸರಣಿ ಗೆದ್ದಿರುವುದು ಇದು ಎರಡನೇ ಬಾರಿ.
* ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಸಂಜು ಸ್ಯಾಮ್ಸನ್ ಶತಕದ ನೆರವಿನಿಂದ 50 ಓವರ್ ಗಳಲ್ಲಿ 8  ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು. ಸಂಜು ಸ್ಯಾಮ್ಸನ್ 108 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಆಫ್ರಿಕಾ 45.5 ಓವರ್ ಗಳಲ್ಲಿ 218 ರನ್ ಗಳಿಗೆ ಆಲೌಟ್ ಆಯಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಜೋರ್ಝಿ ಈ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ಮಾಡಿ 81 ರನ್ ಗಳಿಸಿ ಔಟಾದರು. 
* ಭಾರತೀಯ ಬೌಲರ್ ಗಳ ಸಂಘಟಿತ ದಾಳಿಯಿಂದಾಗಿ ಆಫ್ರಿಕಾ ಸೋಲು ಕಾಣುವಂತಾಯಿತು. ಅರ್ಷ್ ದೀಪ್ ಸಿಂಗ್ 4, ಆವೇಶ್ ಖಾನ್, ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್, ಮುಕೇಶ್ ಕುಮಾರ್, ಅಕ್ಸರ್ ಪಟೇಲ್ ತಲಾ 1 ವಿಕೆಟ್ ಕಬಳಿಸಿದರು.
* ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಏಕದಿನ ಸರಣಿ ಗೆಲುವು ದಾಖಲಿಸಿದ ಭಾರತದ ಅನನುಭವಿ ಆಟಗಾರರ ಬಳಗವನ್ನು ಹಂಗಾಮಿ ನಾಯಕ ಕೆಎಲ್​ ರಾಹುಲ್​ ಶ್ಲಾಘಿಸಿದ್ದಾರೆ. 
* ಸರಣಿಯಲ್ಲಿ ಉತ್ತಮ ಬೌಲಿಂಗ್ ಮಾಡಿದ ಅರ್ಷ್ ದೀಪ್ ಸಿಂಗ್ ಸರಣಿ ಶ್ರೇಷ್ಠ, ಸಂಜು ಸ್ಯಾಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. 
* ಈ ಸರಣಿ ಗೆಲುವಿನ ಮೂಲಕ ಒಂದು ವರ್ಷದಲ್ಲಿ ಅತೀ ಹೆಚ್ಚು ಏಕದಿನ ಪಂದ್ಯ ಗೆದ್ದ (27) ತಂಡಗಳ ಪೈಕಿ ಭಾರತ ಎರಡನೇ ಸ್ಥಾನ ಪಡೆಯಿತು.