* ಆನಂದ್ ಮ್ಯಾರೇಜ್ ಆ್ಯಕ್ಟ್ 1909ರಲ್ಲಿ ಜಾರಿಗೆ ಬಂದು, ಸಿಖ್ ಮದುವೆ ಸಮಾರಂಭವಾದ ಆನಂದ್ ಕಾರಜ್ನ್ನು ಕಾನೂನಾತ್ಮಕವಾಗಿ ಅಂಗೀಕರಿಸಿತು.
* ಇದು ಕೇವಲ ಮದುವೆಯನ್ನು ಮಾನ್ಯಗೊಳಿಸುವ ಕಾಯಿದೆ ಆಗಿದ್ದು, ವಿಚ್ಛೇದನ, ಆಸ್ತಿ ಹಕ್ಕು, ಪಾಲನೆ ಮುಂತಾದ ನಿಯಮಗಳನ್ನು ಒಳಗೊಂಡಿಲ್ಲ.
* 2012ರಲ್ಲಿ ತಿದ್ದುಪಡಿ ಮಾಡಿ, ರಾಜ್ಯ ಸರ್ಕಾರಗಳು ಮದುವೆ ನೋಂದಣಿ ನಿಯಮಗಳನ್ನು ರೂಪಿಸಬೇಕೆಂದು ಹೇಳಲಾಯಿತು. ಆದರೆ ಇನ್ನೂ 17 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳು ನಿಯಮಗಳನ್ನು ರೂಪಿಸಿಲ್ಲ. ಇದರ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಾಲ್ಕು ತಿಂಗಳ ಗಡುವು ನೀಡಿದೆ.
* ಸಿಖ್ ಸಮುದಾಯದ ವಕೀಲ ಅಮಂಜೋತ್ ಸಿಂಗ್ ಚಡ್ಡಾ 2022ರಲ್ಲಿ ಅರ್ಜಿ ಹಾಕಿದ ನಂತರ ಈ ವಿಚಾರ ಗಂಭೀರವಾಗಿ ಗಮನ ಸೆಳೆಯಿತು. ನಿಯಮಗಳ ಕೊರತೆಯಿಂದ ಸಿಖ್ ದಂಪತಿಗಳು ಕಾನೂನಾತ್ಮಕ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಾದಿಸಲಾಯಿತು.
* ಆದರೆ, ತಜ್ಞರ ಅಭಿಪ್ರಾಯದಲ್ಲಿ ಈ ಕಾಯಿದೆ ಸಂಕೇತಾತ್ಮಕವಾಗಿದ್ದು ಮೂರು ಪ್ರಮುಖ ಕೊರತೆಗಳಿವೆ: (1) ಕೇವಲ 10 ಅಂಶಗಳು ಮಾತ್ರ ಇರುವ ಸಣ್ಣ ಕಾಯಿದೆ, (2) ವಿಚ್ಛೇದನ ಅಥವಾ ವಿವಾದ ನಿರ್ವಹಣೆ ಇಲ್ಲ, (3) ಸಿಖ್ ಮದುವೆಯನ್ನು ಇನ್ನೂ ಹಿಂದೂ ಮ್ಯಾರೇಜ್ ಆ್ಯಕ್ಟ್ ಅಡಿಯಲ್ಲಿ ನೋಂದಣಿ ಮಾಡಬೇಕಾದ ಪರಿಸ್ಥಿತಿ.
* ಹೀಗಾಗಿ, ಸಿಖ್ ಸಮುದಾಯಕ್ಕೆ ಪ್ರತ್ಯೇಕವಾಗಿ ಸಂಪೂರ್ಣ ಕಾನೂನಾತ್ಮಕ ಹಕ್ಕುಗಳನ್ನು ಕಲ್ಪಿಸುವಂತೆ ಸಮಗ್ರ ತಿದ್ದುಪಡಿ ಅಗತ್ಯವಿದೆ.
ಶುಕ್ರವಾರ, 26 ಸೆಪ್ಟೆಂಬರ್ 2025
7:58 ಅಪರಾಹ್ನ
Daily PDF
ಆನಂದ ಮ್ಯಾರೇಜ್ ಕಾಯ್ದೆ 1909
Authored by:
Jyoti Angadi