* ಆನ್‌ಲೈನ್ ಶಾಪಿಂಗ್ ನಲ್ಲಿ ಗ್ರಾಹಕರಿಗೆ ಆಗುವ ವಂಚನೆಯನ್ನು ತಡೆಯಲು ಇ-ಕಾಮರ್ಸ್ ವೇದಿಕೆಗಳ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕರಡು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
* ಇ-ಕಾಮರ್ಸ್ ಮೂಲತತ್ವಗಳು ಮತ್ತು ಸ್ವಯಂ ಆಡಳಿತ ಕುರಿತ ಮಾರ್ಗಸೂಚಿಗಳನ್ನು ಭಾರತೀಯ ಪ್ರಮಾಣೀಕರಣ ಸಂಸ್ಥೆ (ಬಿಐಅವಕಾಶವಿದೆ ಎಂದು ತಿಳಿಸಿದವರೊಂದಿಗೆ ವೇದಿಕೆಗಳನ್ನು ಪೂರ್ಣಗೊಳಿಸಬೇಕು. ಅವರ ಸಂಪರ್ಕ ವಿವರ ಮತ್ತು ಗುರುತಿನ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.
* ಗ್ರಾಹಕರು ಹಾಗೂ ಸಂಘ–ಸಂಸ್ಥೆಗಳಿಂದ ಫೆಬ್ರುವರಿ 15ರ ವರೆಗೆ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ.
* ಆಮದು ಸರಕುಗಳ ವಿವರಗಳನ್ನು, ಆಮದುದಾರ, ಪ್ಯಾಕರ್, ಮಾರಾಟಗಾರರ ಸಂಪರ್ಕ ಮಾಹಿತಿಯೊಂದಿಗೆ ಪ್ರಕಟಿಸಬೇಕು.
* ಗ್ರಾಹಕರ ಒಪ್ಪಿಗೆ, ವಹಿವಾಟಿನ ಪರಿಶೀಲನೆಗೆ ಸಹಾಯ ಮಾಡಬೇಕು. ಸರಕು ರದ್ದತಿ, ಹಿಂದಿರುಗಿಸುವಿಕೆ ಮತ್ತು ಮರುಪಾವತಿಗೆ ಪಾರದರ್ಶಕ ನಿಯಮಗಳನ್ನು ಅನುಸರಿಸಬೇಕು. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಸಿದ್ಧಪಡಿಸಿದೆ.
* ಇ–ಕಾಮರ್ಸ್ ವಹಿವಾಟು ಗ್ರಾಹಕರ ರಕ್ಷಣೆ ಮತ್ತು ನಂಬಿಕೆಗೆ ಅನುಗುಣವಾಗಿ ನಡೆಯಬೇಕು. ಸ್ವಯಂ ಆಡಳಿತದ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮಾರ್ಗಸೂಚಿ ತಿಳಿಸಿದೆ.
ಶುಕ್ರವಾರ, 24 ಜನವರಿ 2025
12:05 ಅಪರಾಹ್ನ
Daily PDF
ಆನ್‌ಲೈನ್ ವಂಚನೆ ತಡೆಗೆ ಹೊಸ ಕರಡು ಮಾರ್ಗಸೂಚಿ
Authored by:
Jyoti Angadi