* ಆಂಧ್ರಪ್ರದೇಶದಲ್ಲಿ 10 ವರ್ಷದ ಬಾಲಕನೊಬ್ಬ ‘ಗಿಲಾನ್ ಬರೈ ಸಿಂಡ್ರೋಮ್’ (ದೇಹದ ರೋಗನಿರೋಧಕ ವ್ಯವಸ್ಥೆಯ ಮೇಲಿನ ಆಕ್ರಮಣ–ಜಿಬಿಸಿ) ರೋಗದಿಂದ ಮೃತಪಟ್ಟಿದ್ದು, ಇದು ಜಿಬಿಸಿ ರೋಗದಿಂದ ಸಾವನ್ನಪ್ಪಿದ ರಾಜ್ಯದ ಪ್ರಥಮ ಪ್ರಕರಣವಾಗಿದೆ.
* ಶ್ರೀಕಾಕುಳಂ ಜಿಲ್ಲೆಯ ಸಂತಬೊಮ್ಮಾಳಿ ಗ್ರಾಮಕ್ಕೆ ಸೇರಿದ 10 ವರ್ಷದ ಬಾಲಕ ಜಿಬಿಸಿ ರೋಗ ಲಕ್ಷಣದಿಂದ ಜ.31ರಂದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ಶ್ರೀಕಾಕುಳಂ ಮತ್ತು ವಿಶಾಖಪಟ್ಟಣದ ಸರ್ಕಾರಿ ಆಸ್ಪತ್ರೆ ಸ್ಥಳಾಂತರಿಸಲಾಯಿತು.
* ವಿಶಾಖಪಟ್ಟಣದ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ ಅವನು ಸಾವನ್ನಪ್ಪಿದ್ದಾನೆ. 'ರಾಜ್ಯದಲ್ಲಿ ಈಗಾಗಲೇ 17 ಜನರಲ್ಲಿ ಜಿಬಿಸಿ ಕಾಯಿಲೆ ದೃಢಪಟ್ಟಿದ್ದು, ಅವರೆಲ್ಲರಿಗೂ ವಿಶಾಖಪಟ್ಟಣ, ಕಾಕಿನಾಡ, ಗುಂಟೂರು ಮತ್ತು ಕರ್ನೂಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ' ಎಂದು ಸರ್ಕಾರ ತಿಳಿಸಿದೆ.
ಆಂಧ್ರಪ್ರದೇಶದಲ್ಲಿ ‘ಗಿಲಾನ್ ಬರೈ ಸಿಂಡ್ರೋಮ್’ ಕಾಯಿಲೆಗೆ ಮೊದಲ ಬಲಿ
Published by Jyoti Angadi
17 ಫೆಬ್ರವರಿ 2025