* ನರಸಿಪಟ್ಟಣಂ ಶಾಸಕ ಸಿ.ಅಯ್ಯನ್ನಪತ್ರುಡು ಅವರು ಆಂಧ್ರ ಪ್ರದೇಶ ವಿಧಾನಸಭೆಯ ಸಭಾಧ್ಯಕ್ಷರಾಗಿ ಜೂನ್ 22 ರಂದು (ಶನಿವಾರ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
* ಬೇರೆ ಯಾವ ಶಾಸಕರೂ ಸಭಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರಲಿಲ್ಲ. ಹೀಗಾಗಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಪತ್ರುಡು ಆಯ್ಕೆ ಔಪಚಾರಿಕವಾಗಿ ನಡೆಯಿತು ಎಂದು ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಪಿಪಿಕೆ ರಾಮಾಚಾರ್ಯುಲು ಅವರು ತಿಳಿಸಿದ್ದಾರೆ.
ಆಂಧ್ರ ಪ್ರದೇಶ ವಿಧಾನಸಭೆ ಸ್ಪೀಕರ್ ಆಗಿ ಟಿಡಿಪಿಯ ಅಯ್ಯನ್ನಪತ್ರುಡು ಅವಿರೋಧ ಆಯ್ಕೆ
Published by Bhagya R K
24 ಜೂನ್ 2024