* ಚೀನಾ ಹಿಂದೂ ಮಹಾಸಾಗರದಲ್ಲಿ ನೌಕಾ ಶಕ್ತಿಯನ್ನು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತವೂ ತದನುಸಾರ ತಯಾರಿ ನಡೆಸುತ್ತಿದೆ.
* ಭಾರತವು ಆಂಧ್ರಪ್ರದೇಶದ ಕರಾವಳಿಯಲ್ಲಿ ಹೊಸ ನೌಕಾ ನೆಲೆ ಸ್ಥಾಪಿಸಲು ಯೋಜಿಸಿದೆ, ಈ ನೆಲೆಯಲ್ಲಿ ಪರಮಾಣು ಜಲಾಂತರ್ಗಾಮಿ ನೌಕೆಗಳು ಸೇರಲಿವೆ.
* ಈ ನೆಲೆ ವಿಶಾಖಪಟ್ನಂನಲ್ಲಿ ಇರುವ ಈಸ್ಟ್ ನಾವಲ್ ಕಮಾಂಡ್‌ನಿಂದ 50 ಕಿ.ಮೀ ದೂರದ ರಾಂಬಿಲ್ಲಿಯಲ್ಲಿ ನಿರ್ಮಾಣವಾಗುತ್ತಿದೆ.
* ರಾಂಬಿಲ್ಲಿ ನೌಕಾ ನೆಲೆಯಲ್ಲಿ ಪರಮಾಣು ನೌಕೆಗಳಿಗೆ ಸುರಂಗ ಮಾರ್ಗ ವ್ಯವಸ್ಥೆ ಒದಗಿಸಲಾಗಿದೆ.
* 'ಪ್ರಾಜೆಕ್ಟ್ ವರ್ಷ' ಅಡಿಯಲ್ಲಿ ಈ ನೆಲೆಯ ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, 2026ರಲ್ಲಿ ಕಾರ್ಯಾರಂಭವಾಗಲಿದೆ. ಪ್ರಾಜೆಕ್ಟ್ ವರ್ಷ ನಂತರ ಹಂತಹಂತಗಳಲ್ಲಿ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.
* ಪಶ್ಚಿಮ ತೀರದ ಕಾರವಾರ ಬಂದರಿನಲ್ಲಿ 'ಪ್ರಾಜೆಕ್ಟ್ ಸೀ ಬರ್ಡ್' ಅಡಿಯಲ್ಲಿ 32 ಯುದ್ಧ ನೌಕೆಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ.
* ಕಾರವಾರ ಒಳ ಬಂದರು ಸಿದ್ಧವಾಗಿದ್ದು, ಹೊರ ಬಂದರಿನ ಕಾಮಗಾರಿ ಪ್ರಗತಿಯಲ್ಲಿದೆ.
ಶುಕ್ರವಾರ, 11 ಎಪ್ರಿಲ್ 2025
11:55 ಪೂರ್ವಾಹ್ನ
Daily PDF
ಆಂಧ್ರ ಕರಾವಳಿಯಲ್ಲಿ ಹೊಸ ನೌಕಾ ನೆಲೆ
Authored by:
Jyoti Angadi