* ವಿಶ್ವ ಆರೋಗ್ಯ ಸಂಸ್ಥೆಯು ಅಕ್ಟೋಬರ್ 7ರಿಂದ 9ರವರೆಗೆ ನವದೆಹಲಿಯಲ್ಲಿ ಆಗ್ನೇಯ ಏಷ್ಯಾದ ಪ್ರಾದೇಶಿಕ ಸಮಿತಿಯ 77ನೇ ಅಧಿವೇಶನವನ್ನು ಪ್ರಾರಂಭಿಸಿದೆ. ಭಾರತದ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು 77ನೇ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
* ಆಗ್ನೇಯ ಏಷ್ಯಾ ಪ್ರದೇಶವು ಬಾಂಗ್ಲಾದೇಶ, ಭೂತಾನ್, ಡಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ, ಭಾರತ, ಇಂಡೋನೇಷ್ಯಾ, ಮಾಲೀವ್ ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ, ಥೈಲ್ಯಾಂಡ್ ಮತ್ತು ಟಿಮೋರ್-ಲೆಸ್ತೆ ಒಟ್ಟು 11 ರಾಷ್ಟ್ರಗಳನ್ನು ಒಳಗೊಂಡಿವೆ.
* ಆಗ್ನೇಯ ಏಷ್ಯಾ ಪ್ರದೇಶಗಳಲ್ಲಿನ ಜನರು ಅನುಭವಿಸುತ್ತಿರುವ ಅರೋಗ್ಯ ಸವಾಲುಗಳನ್ನು ಈ ಅಧಿವೇಶನವು ಚರ್ಚಿಸುತ್ತದೆ. ಮತ್ತು ಜಾಗತೀಕ ಜನಸಂಖ್ಯೆ ಶೇ.25 ಕ್ಕಿಂತ ಹೆಚ್ಚಿನ ಮಂದಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
* ಜನರ ಆರೋಗ್ಯಕರ ಸಂಬಂದಿಸಿದ ಅಡಿಟಿತೆ ಗುರುತಿಸುವುದು, ಎಲ್ಲರಿಗೂ ಆರೋಗ್ಯ ಸೌಲಭ್ಯಗಳನ್ನು ದೊರಕುವಂತೆ ಮಾಡುವುದು ಈ ಅಧಿವೇಶನದ ಮುಖ್ಯ ಗುರಿಯಾಗಿದೆ. ಪ್ರದೇಶದ ಸುಮಾರು ಎರಡು ಶತಕೋಟಿ ಜನರಿಗೆ ಉತ್ತಮ,ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಲು ಬದ್ಧವಾಗಿದೆ.
* ಹೃದ್ರೋಗ , ಮಧುಮೇಹದಂತಹ ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚಳ, ಮಾನಸಿಕ ಖಿನ್ಯತೆ, ನವಜಾತ ಶಿಶುಗಳ ಮರಣ ದರದಲ್ಲಿ ಹೆಚ್ಚಳ, ಕ್ಷಯರೋಗಗಳು ಹೆಚ್ಚುತ್ತಿರುದಾಗಿ WHO ಅಧಿಕಾರಿ ರಜಿಯಾ ಪೆಂಡ್ಸೆ ಅವರು ಹೇಳಿದ್ದಾರೆ.
ಆಗ್ನೇಯ ಏಷ್ಯಾ ಪ್ರಾದೇಶಿಕ 77 ಅಧಿವೇಶನಕ್ಕೆ ಅಧ್ಯಕ್ಷರಾಗಿ ಜೆ.ಪಿ.ನಡ್ಡಾ ಆಯ್ಕೆ
Published by Jyoti Angadi
09 ಅಕ್ಟೋಬರ್ 2024