* ಸರ್ಕಾರಿ ಸ್ವಾಮ್ಯದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಿಂದ (ಐಒಬಿ) ಗ್ರಾಹಕರಿಗೆ ಆಧಾರ್ ಒಟಿಪಿ ಮೂಲಕ ಉಳಿತಾಯ ಖಾತೆ ತೆರೆಯುವ ಸೌಲಭ್ಯ ಒದಗಿಸಲಾಗಿದೆ.
* ಕಾರ್ಪೊರೇಟ್ ವಲಯದ ಗ್ರಾಹಕರ ಸುಲಭತೆಯಿಗಾಗಿ ಎಪಿಐ (ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್) ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಬ್ಯಾಂಕ್ ತನ್ನ 89ನೇ ಸಂಸ್ಥಾಪನಾ ದಿನದ ಹಬ್ಬವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಜಯ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.
* ಗ್ರಾಹಕರು ಬ್ಯಾಂಕ್‌ನ ಜಾಲತಾಣಕ್ಕೆ ಭೇಟಿ ನೀಡಿ ಆಧಾರ್ ಸಂಖ್ಯೆ ನಮೂದಿಸಬೇಕು. ಬಳಿಕ ಆಧಾರ್ ಕಾರ್ಡ್‌ನಲ್ಲಿ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಇದನ್ನು ಬಳಸಿ ಖಾತೆ ಆರಂಭಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
* ಭಾರತೀಯ ರಿಸರ್ವ್ ಬ್ಯಾಂಕ್‌ನ ಆಧಾರ್ ಒಟಿಪಿ ಆಧರಿತ ಇ–ಕೆವೈಸಿ ಮಾರ್ಗದರ್ಶನಗಳ ಪ್ರಕಾರ ಈ ಸೌಲಭ್ಯ ನೀಡಲಾಗಿದೆ. ಯಾವುದೇ ಅಡಚಣೆ ಇಲ್ಲದೆ ಗ್ರಾಹಕರು ಖಾತೆ ತೆರೆಯಬಹುದಾಗಿದೆ. ಇದಕ್ಕಾಗಿ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
* ಸಕಾಲದಲ್ಲಿ ಕಾರ್ಪೊರೇಟ್ ವಲಯದ ಗ್ರಾಹಕರು ನೇರವಾಗಿ ತಮ್ಮ ಖಾತೆಗಳಿಂದ ಇತರೆ ಬ್ಯಾಂಕ್ ಖಾತೆಗಳಿಗೆ ಸುಲಭವಾಗಿ ಹಣ ವರ್ಗಾಯಿಸಲು ಎಪಿಐ ಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಆಧಾರ್ OTP ಬಳಸಿ ಬ್ಯಾಂಕ್ ಖಾತೆ ತೆರೆಯುವ ಸೌಲಭ್ಯ
Published by Jyoti Angadi
19 ಫೆಬ್ರವರಿ 2025