* ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ 51ನೇ ‘ಜಿ7’ ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾಗೆ ಬಂದಿಳಿದಿದ್ದಾರೆ. ಇದು ಸತತ 6ನೇ ಬಾರಿಗೆ ಅವರು ಜಿ7 ಶೃಂಗದಲ್ಲಿ ಪಾಲ್ಗೊಳ್ಳುತ್ತಿರುವುದು.
* ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಳಿಕ ಮೊದಲ ಬಾರಿಗೆ ಅವರು ಕೆನಡಾ ಭೇಟಿಯನ್ನೆತ್ತಿದ್ದಾರೆ. ಇದು 10 ವರ್ಷಗಳಲ್ಲಿ ಅವರ ಮೊದಲ ಕೆನಡಾ ಭೇಟಿ.
* ಈ ಶೃಂಗದಲ್ಲಿ ಇಂಧನ ಭದ್ರತೆ, ತಂತ್ರಜ್ಞಾನ, ನಾವೀನ್ಯತೆ ಮತ್ತು ಕೃತಕಬುದ್ಧಿಮತ್ತೆ (AI) ಕುರಿತಂತೆ ಚರ್ಚೆಗಳು ನಡೆಯಲಿದ್ದು, ಜಾಗತಿಕ ಸವಾಲುಗಳ ಪರಿಹಾರೋಪಾಯಗಳ ಕುರಿತು ನಾಯಕರ ಅಭಿಪ್ರಾಯ ವಿನಿಮಯವಾಗಲಿದೆ.
* ಜಿ7 ಸದಸ್ಯರು (ಅಮೆರಿಕ, ಜಪಾನ್, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಕೆನಡಾ, ಇಟಲಿ) ಜೊತೆಗೆ ಐಎಂಎಫ್, ವಿಶ್ವಬ್ಯಾಂಕ್ ಮತ್ತು ಯುಎನ್ ಪ್ರತಿನಿಧಿಗಳೂ ಶೃಂಗದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
* ಮೋದಿ ಅವರು ಸೈಪ್ರಸ್, ಕೆನಡಾ ಮತ್ತು ಕ್ರೊಯೇಷಿಯಾ ಪ್ರವಾಸ ಕೈಗೊಂಡಿದ್ದು, ಸೈಪ್ರಸ್‌ನಲ್ಲಿ ರಾಷ್ಟ್ರಪತಿ ನಿಕೋಸ್ ಅವರು ಮೋದಿಗೆ ರಾಷ್ಟ್ರದ ಉನ್ನತ ಗೌರವ ‘ಗ್ರ್ಯಾಂಡ್ ಕ್ರಾಸ್ ಆಫ್ ಮಕರಿಯೋಸ್–3’ ನೀಡಿ ಸನ್ಮಾನಿಸಿದರು.
51ನೇ ಜಿ–7 ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾಗೆ ಬಂದಿಳಿದ ಪ್ರಧಾನಿ ಮೋದಿ
Published by Akshata Halli
17 ಜೂನ್ 2025