* ನಾಲ್ಕು ದಶಕಗಳಿಂದ ನಾಪತ್ತೆಯಾಗಿದ್ದ ನಾಮದಾಫ ಫ್ಲೈಯಿಂಗ್ ಅಳಿಲು ಅರುಣಾಚಲ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಈ ರಾತ್ರಿಯ ಹಾರುವ ಅಳಿಲು ಚಾಂಗ್ಲಾಂಗ್ ಜಿಲ್ಲೆಗೆ ಸ್ಥಳೀಯವಾಗಿದೆ ಮತ್ತು ಅರುಣಾಚಲ ಪ್ರದೇಶಕ್ಕೆ ನಿರ್ದಿಷ್ಟವಾಗಿ ನಾಮದಾಫಾ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳೀಯವಾಗಿದೆ.
* ನಾಮ್‌ಫಾ ಹಾರುವ ಅಳಿಲು (ಬಿಸ್ವಾಮೊಯೋಪೈರಸ್ ಬಿಸ್ವಾಸಿ) ತೀವ್ರ ಅಳಿವಿನಂಚಿನಲ್ಲಿರುವ ಪ್ರಭೇದಗಳ ಪಟ್ಟಿಯಲ್ಲಿದೆ. ಸಮೀಕ್ಷೆಗಳ ಪ್ರಕಾರ ಉದ್ಯಾನದಲ್ಲಿ ಲಭ್ಯವಿರುವ ಈ ಅಳಿಲುಗಳ ವಾಸಸ್ಥಾನದ ವ್ಯಾಪ್ತಿ ಪ್ರದೇಶ 100 ಕಿಲೋಮೀಟರ್‌ಗಳಿಗಿಂತ ಕಡಿಮೆ ಎಂದು ಅಂದಾಜಿಸಲಾಗಿದೆ.
* ಸಮುದ್ರಮಟ್ಟದಿಂದ 100ರಿಂದ 350 ಮೀಟರ್ ಎತ್ತರದಲ್ಲಿರುವ ಪೂರ್ವ ಹಿಮಾಲಯದ ಜೀವವೈವಿಧ್ಯ ವಲಯದಲ್ಲಿರುವ ಅತಿದೊಡ್ಡ ಸಂರಕ್ಷಿತ ಪ್ರದೇಶವಾದ ನಾಮ್‌ಫಾ ರಾಷ್ಟ್ರೀಯ ಉದ್ಯಾನದಲ್ಲಿ 1981ರಲ್ಲಿ ಕಂಡ ಏಕೈಕ ಅಳಿಲಾಗಿತ್ತು.
* ರಾಷ್ಟ್ರೀಯ ಉದ್ಯಾನ ಮತ್ತು ಹುಲಿಸಂರಕ್ಷಿತ ಪ್ರದೇಶ ಎಂಬ ಎರಡೂ ಮನ್ನಣೆಗಳಿಗೆ ಪಾತ್ರವಾಗಿರುವ ನಾಮ್‌ಫಾ ಅರಣ್ಯಪ್ರದೇಶವು ತನ್ನ ವಿಸ್ತಾರವಾದ ಹಚ್ಚಹಸುರಿನ ದಟ್ಟ ಕಾಡುಗಳೊಂದಿಗೆ 1985.23 ಚದರ ಕಿಲೋಮೀಟರ್ ವಿಸ್ತೀರ್ಣಗಳವರೆಗೆ ಹಬ್ಬಿದೆ.
* ಈಶಾನ್ಯ ಭಾರತದ ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯೊಳಗೆ ಭಾರತ ಮತ್ತು ಮ್ಯಾನ್ಮಾರ್ (ಬರ್ಮಾ) ನಡುವಿನ ಅಂತರರಾಷ್ಟ್ರೀಯ ಗಡಿಯಲ್ಲಿ ನೆಲೆಗೊಂಡಿರುವ ನಾಮ್‌ಫಾ ರಾಷ್ಟ್ರೀಯ ಉದ್ಯಾನವು ಮಿಯಾವೊ ಜಿಲ್ಲೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದು ನೋವಾ-ಡಿಹಿಂಗ್ ನದಿಯ ಉದ್ದಕ್ಕೂ ಹಬ್ಬಿರುವ ಹಿಮಾಚ್ಛಾದಿತ ನೀಲಿ ಬೆಟ್ಟಗಳ ನಡುವೆ ನೆಲೆಸಿದೆ.
* ತನ್ನ ವಿಸ್ತಾರವಾದ ಉಷ್ಣವಲಯದ ಮಳೆಕಾಡಿಗೆ ಹೆಸರುವಾಸಿಯಾಗಿರುವ ಈ ಅರಣ್ಯವನ್ನು 1983ರಲ್ಲಿ ಸರ್ಕಾರವು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿತು.
* ಯಥೇಚ್ಛ ಅರಣ್ಯ ಸಂಪನ್ಮೂಲವನ್ನು ಹೊಂದಿದ್ದು ಅಲ್ಲಿನ ಪ್ರಾಣಿ ಮತ್ತು ಸಸ್ಯ ಪ್ರಬೇಧಗಳು ಹಾಗೂ ಸುದೀರ್ಘ ಕಾಲದಲ್ಲಿ ನಡೆಯುವ ಅನುವಂಶಿಕ ಬದಲಾವಣೆಯ ಬಗ್ಗೆ ಸಮಗ್ರ ಅಧ್ಯಯನವನ್ನು ಕೈಗೊಳ್ಳಬೇಕಾಗಿದೆ.
* ನಾಮ್‌ಫಾ ಅರಣ್ಯಪ್ರದೇಶವು ಸಸ್ಯಶಾಸ್ತ್ರಜ್ಞರ ಕನಸಿನ ಸಂಶೋಧನಾ ತಾಣವಾಗಿದ್ದು, ಸಂಪೂರ್ಣ ಸಸ್ಯಶಾಸ್ತ್ರೀಯ ಸಮೀಕ್ಷೆಗೆ 50 ವರ್ಷಗಳ ಕಾಲ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
* ಈ ಪ್ರದೇಶವು ಭಾರತದಲ್ಲಿ ಬೇರೆಲ್ಲಿಯೂ ಕಂಡುಬರದ ಸೆವಸ್ ಮೆರ್ಕುಸಿ ಮತ್ತು ಆಲೀಶ್ ಗಲಾಗಿ ಬೇರಿದ ಈ ಪ್ರದೇಶವು ಭಾರತದಲ್ಲಿ ಬೇರೆಲ್ಲಿಯೂ ಕಂಡುಬರದ ಪೈನಸ್ ಮೆರ್ಕುಸಿ ಮತ್ತು ಅಬೀಸ್ ಡೆಲವಾವಿ ಸೇರಿದಂತೆ 150ಕ್ಕೂ ಹೆಚ್ಚು ಜಾತಿಯ ಮರಗಳನ್ನು ಹೊಂದಿದೆ.
* ವಿಶೇಷವಾಗಿ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಆರ್ಕಿಡ್‌ಗಳಲ್ಲಿ ಒಂದಾದ ಬ್ಲೂ ವಂಡಾ ಆರ್ಕಿಡ್‌ಗಳು ಇಲ್ಲಿ ಬೆಳೆಯುತ್ತದೆ. ಉದ್ಯಾನದಲ್ಲಿ ಮಿಶಿಮಿ ಟೀಟಾ (ಕೋಷ್ಠಿ ಟೀಟಾ) ಸಸ್ಯಗಳು ಬೆಳೆಯುತ್ತಿದ್ದು ಇದು ಸ್ಥಳೀಯವಾಗಿ ಪ್ರಸಿದ್ಧ ಔಷಧೀಯ ಸಸ್ಯವಾಗಿದೆ. ಮಿಶಿಮಿ ಟೀಟಾ ಸಸ್ಯಗಳನ್ನು ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ.
* ಇದು ಜಗತ್ತಿನಲ್ಲಿಯೇ ಎಲ್ಲಾ ನಾಲ್ಕು ಬೆಕ್ಕಿನ ಪ್ರಭೇದಕ್ಕೆ ಸೇರುವ ದೊಡ್ಡ ಬೆಕ್ಕುಗಳನ್ನು ಒಂದೇ ಕಡೆ ಪೊರೆಯುವ ಏಕೈಕ ಉದ್ಯಾನವಾಗಿದೆ. ಹುಲಿ( ಪ್ಯಾಂಥೆರಾ ಟೈಗ್ರಿಸ್), ಚಿರತೆ (ಪ್ಯಾಂಥೆರಾ ಪಾರ್ಡಸ್), ಹಿಮಚಿರತೆ (ಪ್ಯಾಂಥೆರಾ ಅನ್ಸಿಯಾ), ಮತ್ತು ಕೌಡಡ್ ಲೆಪರ್ಡ್ (ನಿಯೋಫೆಲಿಸ್ ನೆಬುಲೋಸಾ)
* ಅಸ್ಸಾಮಿ ಮಕಾಕ್, ಹಂದಿ-ಬಾಲದ ಮಕಾಕ್, ಸ್ಟಂಪ್-ಟೈಲ್ಸ್ ಮಕಾಕ್ ಮತ್ತು ಭಾರತದ ಏಕೈಕ 'ವಾನರ' ಜಾತಿಯ ಅಳಿವಿನಂಚಿನಲ್ಲಿರುವ ಹೂಲಾಕ್ ಗಿಬ್ಬನ್ಸ್ (ಹೈಲೋಬೇಟ್ಸ್ ಹೂಲಾಕ್) ಸೇರಿದಂತೆ ಹಲವು ಪ್ರೈಮೇಟ್ ಪ್ರಭೇದಗಳು ಈ ಅರಣ್ಯದಲ್ಲಿ ವಾಸಿಸುತ್ತವೆ. ಆನೆಗಳು, ಕಪ್ಪು ಕರಡಿಗಳು, ಭಾರತೀಯ ಕಾಡೆಮ್ಮೆ, ವಿವಿಧ ಜಿಂಕೆ ಜಾತಿಗಳು, ಸರೀಸೃಪಗಳು ಮತ್ತು ವಿವಿಧ ವೃಕ್ಷದ ಪ್ರಾಣಿಗಳು ಇಲ್ಲಿ ಯಥೇಚ್ಛವಾಗಿ ಕಂಡುಬರುತ್ತವೆ.
ಗುರುವಾರ, 18 ಜನವರಿ 2024
1:42 ಅಪರಾಹ್ನ
Daily PDF
42 ವರ್ಷಗಳ ನಂತರ ಅರುಣಾಚಲ ಪ್ರದೇಶದಲ್ಲಿ ನಾಮದಾಫ ಹಾರುವ ಅಳಿಲು ಪತ್ತೆ
Authored by:
Bhagya R K