* ಭಾರತವು 2030ರ ವೇಳೆಗೆ ತನ್ನ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು 300 ಮಿಲಿಯನ್ ಟನ್‌ಗಳಿಗೆ ವೃದ್ಧಿಸುವ ಗುರಿಯತ್ತ ಸಾಗುತ್ತಿದೆ.
* 2024-25ರ ಹಣಕಾಸು ವರ್ಷದ ಏಪ್ರಿಲ್ ನಿಂದ ಡಿಸೆಂಬರ್ ಅವಧಿಯಲ್ಲಿ ದೇಶವು 110.99 ಮಿಲಿಯನ್ ಟನ್ ಕಚ್ಚಾ ಉಕ್ಕು ಮತ್ತು 106.86 ಮಿಲಿಯನ್ ಟನ್ ಸಿದ್ದ ಉಕ್ಕನ್ನು ಉತ್ಪಾದಿಸಿದೆ.
* ಉಕ್ಕು ವಲಯದಲ್ಲಿ ಭಾರತ ಕೈಗೊಂಡಿರುವ ಮಹತ್ವಾಕಾಂಕ್ಷಿ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಜ್ಞಾನ ಹಂಚಿಕೆ ಹಾಗೂ ಅಂತಾರಾಷ್ಟ್ರೀಯ ಸಹಯೋಗಕ್ಕೆ ಹೊಸ ಅವಕಾಶಗಳನ್ನು ಕಲ್ಪಿಸಲು ಭಾರತವು ಉಕ್ಕಿನ ವ್ಯಾಪಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಮುಂದಾಗಿದೆ.
* ಕೇಂದ್ರ ಸರಕಾರದ ನೀತಿ ಸುಧಾರಣೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಪ್ರಯತ್ನಗಳನ್ನು ಪ್ರದರ್ಶಿಸುವ ಉದ್ದೇಶದಿಂದ ‘ಇಂಡಿಯಾ ಸ್ಟೀಲ್ 2025’ ಕಾರ್ಯಕ್ರಮ ಮುಂಬಯಿಯಲ್ಲಿ ಮುಂದಿನ ವಾರ ನಡೆಯಲಿದೆ.
* ಏಪ್ರಿಲ್ 24ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಜಾಗತಿಕ ಉಕ್ಕು ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡುವರು.
* ಈ ಸಮಾರಂಭದಲ್ಲಿ ರಷ್ಯಾದ ಕೈಗಾರಿಕೆ ಮತ್ತು ವ್ಯಾಪಾರ ಉಪಸಚಿವರು, ಆಸ್ಟ್ರೇಲಿಯಾ, ಮೊಜಾಂಬಿಕ್ ಮತ್ತು ಮಂಗೋಲಿಯಾದ ರಾಯಭಾರಿಗಳು ಸೇರಿದಂತೆ ಜಾಗತಿಕ ಕೈಗಾರಿಕಾ ನಾಯಕರು ಮತ್ತು ಹಿರಿಯ ವಿದೇಶಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದು ಜಗತ್ತಿನಾದ್ಯಾಂತ ಅತಿದೊಡ್ಡ ಉಕ್ಕು ಸಮಾವೇಶಗಳಲ್ಲಿ ಒಂದಾಗಲಿದೆ.
30 ಕೋಟಿ ಟನ್ ಉಕ್ಕು ಉತ್ಪಾದನೆಯ ಗುರಿ
Published by Jyoti Angadi
21 ಏಪ್ರಿಲ್ 2025