➤ ಭಾರತ ಮತ್ತು ಮಧ್ಯ ಏಷ್ಯಾದ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಉಜ್ಬೇಕಿಸ್ತಾನ್ ಸರ್ಕಾರವು ಭಾರತೀಯ ನಾಗರಿಕರಿಗೆ 30 ದಿನಗಳ ವೀಸಾ ಮುಕ್ತ (Visa-Free Entry) ಪ್ರವೇಶವನ್ನು ಅಧಿಕೃತವಾಗಿ ಘೋಷಿಸಿದೆ. ತಾಷ್ಕೆಂಟ್‌ನಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಯ ವೇಳೆ, ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೇವ್ (Shavkat Mirziyoyev) ಈ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದ್ದಾರೆ.
- ವೀಸಾ ಮುಕ್ತ ಅವಧಿ: ಭಾರತೀಯ ಪ್ರವಾಸಿಗರು ಮತ್ತು ಉದ್ಯಮಿಗಳು ಯಾವುದೇ ವೀಸಾ ಇಲ್ಲದೆ 30 ದಿನಗಳ ಕಾಲ ಉಜ್ಬೇಕಿಸ್ತಾನ್‌ನಲ್ಲಿ ಪ್ರಯಾಣಿಸಬಹುದು.
- ಆರ್ಥಿಕ ಮತ್ತು ಪ್ರವಾಸೋದ್ಯಮ ಪ್ರಗತಿ: ಈ ನಿರ್ಧಾರದಿಂದ ಎರಡೂ ದೇಶಗಳ ನಡುವೆ ವ್ಯಾಪಾರ, ಸಾಂಸ್ಕೃತಿಕ ವಿನಿಮಯ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ.
- ದ್ವಿಪಕ್ಷೀಯ ವ್ಯಾಪಾರ: ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಉಜ್ಬೇಕಿಸ್ತಾನ್ ನಡುವಿನ ದ್ವಿಪಕ್ಷೀಯ ವ್ಯಾಪಾರವು 1 ಬಿಲಿಯನ್ ಅಮೆರಿಕನ್ ಡಾಲರ್ ಗಡಿಯನ್ನು ದಾಟಿದೆ.
- ನೇರ ವಿಮಾನ ಸಂಪರ್ಕ: ಪ್ರಸ್ತುತ ಉಭಯ ದೇಶಗಳ ನಡುವೆ ವಾರಕ್ಕೆ 14 ನೇರ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.
- ಕಾರ್ಯತಂತ್ರದ ಪಾಲುದಾರಿಕೆ: ಭಾರತವನ್ನು 'ವಿಶ್ವಾಸಾರ್ಹ ಕಾರ್ಯತಂತ್ರದ ಪಾಲುದಾರ' (Trusted Strategic Partner) ಎಂದು ಉಜ್ಬೇಕಿಸ್ತಾನ್ ಬಣ್ಣಿಸಿದೆ. (ಭಾರತ-ಉಜ್ಬೇಕಿಸ್ತಾನ್ ನಡುವೆ 2011ರಲ್ಲಿ ಕಾರ್ಯತಂತ್ರದ ಪಾಲುದಾರಿಕೆ ಸ್ಥಾಪನೆಯಾಗಿತ್ತು).
➤ ಕಿರ್ಗಿಸ್ತಾನ್‌ಗೆ ಪ್ರಧಾನಿ ಮೋದಿ ಭೇಟಿ & SCO ಶೃಂಗಸಭೆ: ಉಜ್ಬೇಕಿಸ್ತಾನ್ ಭೇಟಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು 26ನೇ ಶಾಂಘೈ ಸಹಕಾರ ಸಂಸ್ಥೆ (SCO - Shanghai Cooperation Organisation) ಶೃಂಗಸಭೆಯಲ್ಲಿ ಭಾಗವಹಿಸಲು ಕಿರ್ಗಿಸ್ತಾನ್ ರಾಜಧಾನಿಯಾದ ಬಿಷ್ಕೆಕ್ (Bishkek) ಗೆ ಭೇಟಿ ನೀಡಿದರು.
1. ಗಾಂಧಿ ಸ್ಮಾರಕಕ್ಕೆ ನಮನ: ಬಿಷ್ಕೆಕ್‌ನಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಪ್ರಧಾನಿ ಪುಷ್ಪನಮನ ಸಲ್ಲಿಸಿ, ಗಾಂಧೀಜಿಯವರ ಶಾಂತಿ, ಅಹಿಂಸೆ ಮತ್ತು ಸೌಹಾರ್ದತೆಯ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತ ಎಂದು ಸ್ಮರಿಸಿದರು.
2. 'ಫ್ರೆಂಡ್ಸ್ ಆಫ್ ಇಂಡಿಯಾ' ಭೇಟಿ: ಕಿರ್ಗಿಸ್ತಾನ್‌ನಲ್ಲಿರುವ ಭಾರತೀಯ ಸಮುದಾಯದ ಪ್ರಮುಖರು, ಯೋಗಪಟುಗಳು, ಶಿಕ್ಷಣ ತಜ್ಞರು, ಪರಿಸರ ತಜ್ಞರು ಹಾಗೂ ITEC (Indian Technical and Economic Cooperation) ಹಳೆ ವಿದ್ಯಾರ್ಥಿಗಳನ್ನು ಒಳಗೊಂಡ 'Friends of India' ಬಳಗದೊಂದಿಗೆ ಸಂವಾದ ನಡೆಸಿದರು.
3. SCO ಶೃಂಗಸಭೆಯ ಪ್ರಮುಖ ಉದ್ದೇಶಗಳು:
- ಭಯೋತ್ಪಾದನೆ ಮತ್ತು ಉಗ್ರವಾದ ಮುಕ್ತ ಪ್ರಾದೇಶಿಕ ಭದ್ರತೆ.
- ಆರ್ಥಿಕ ಸಹಕಾರ ಹಾಗೂ ಮಧ್ಯ ಏಷ್ಯಾದ ದೇಶಗಳ ನಡುವೆ ಉತ್ತಮ ಸಂಪರ್ಕ (Connectivity) ಸಾಧಿಸುವುದು.
ಮಂಗಳವಾರ, 01 ಸೆಪ್ಟೆಂಬರ್ 2026
3:12 ಅಪರಾಹ್ನ
Daily PDF
ಉಜ್ಬೇಕಿಸ್ತಾನ್ಗೆ ಭಾರತೀಯರಿಗೆ 30 ದಿನಗಳ ಉಚಿತ ವೀಸಾ ಪ್ರವೇಶ: ದ್ವಿಪಕ್ಷೀಯ ಬಾಂಧವ್ಯಕ್ಕೆ ಹೊಸ ಮೆರುಗು
Authored by:
Akshata Halli