* ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರನ್ನು 23ನೇ ಕಾನೂನು ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಅವರು ಏಪ್ರಿಲ್ 15ರಂದು ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಕಾನೂನು ಸಚಿವಾಲಯ ತನ್ನ 'ಎಕ್ಸ್' ಖಾತೆಯಲ್ಲಿ ತಿಳಿಸಿದೆ.
* ಕಳೆದ ವರ್ಷ ಸೆಪ್ಟೆಂಬರ್ 3ರಂದು ಮೂರು ವರ್ಷದ ಅವಧಿಗೆ ರಚಿಸಲಾದ 23ನೇ ಕಾನೂನು ಆಯೋಗಕ್ಕೆ ವಕೀಲ ಹಿತೇಶ್ ಜೈನ್ ಹಾಗೂ ಪ್ರೊ. ಡಿ.ಪಿ. ವರ್ಮಾ ಪೂರ್ಣಾವಧಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.
* ಪ್ರೊ. ವರ್ಮಾ ಮುಂಚಿನ ಕಾನೂನು ಆಯೋಗದ ಸದಸ್ಯರಾಗಿದ್ದರು. ಏಕರೂಪ ನಾಗರಿಕ ಸಂಹಿತೆ ಸಾಧ್ಯವಿದೆಯೇ ಎಂಬುದರ ಕುರಿತ ಅಧ್ಯಯನ ಕಾರ್ಯವನ್ನು ಈ ಆಯೋಗಕ್ಕೆ ನೀಡಲಾಗಿದೆ.
* ನ್ಯಾ. ಮಾಹೇಶ್ವರಿ ಅವರು ಮೇ 2023ರಲ್ಲಿ ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾಗಿದ್ದರು. ಸುಪ್ರೀಂ ಕೋರ್ಟ್‌ಗೆ ಬರಲಿರುವ ಮೊದಲು ಅವರು ಕರ್ನಾಟಕ ಹಾಗೂ ಮೇಘಾಲಯ ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.
23ನೇ ಕಾನೂನು ಆಯೋಗದ ಅಧ್ಯಕ್ಷರಾಗಿ ದಿನೇಶ್ ಮಾಹೇಶ್ವರಿ ಅಧಿಕಾರ ಸ್ವೀಕಾರ
Published by Jyoti Angadi
16 ಏಪ್ರಿಲ್ 2025