* ಬಿಹಾರದ ಔರಂಗಾಬಾದ್‌ನಲ್ಲಿ 21,400 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 02 ರಂದು ಚಾಲನೆ ನೀಡಿದರು.
* 18 ಸಾವಿರ ಕೋಟಿಗೂ ಅಧಿಕ ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಮತ್ತು ಗಂಗಾ ಸೇತುವಿಗೆ ಸಮಾನಾಂತರವಾಗಿ ನಿರ್ಮಾಣಗೊಳ್ಳಲಿರುವ ಗಂಗಾ ನದಿಯ ಮೇಲೆ ಅರು ಪಥಗಳ ಸೇತುವೆಗಳನ್ನೂ ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು.
* ಪ್ರಧಾನಿ ಮೋದಿಯವರು ವಿವಿಧ ರಾಜ್ಯಗಳಲ್ಲಿ ಹರಡಿರುವ ಸುಮಾರು 1.48 ಲಕ್ಷ ಕೋಟಿ ರೂಪಾಯಿ ಮೌಲ್ಯದ ತೈಲ ಮತ್ತು ಅನಿಲ ವಲಯದ ಬಹು ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
* ಬೇಗುಸರಾಯ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಕೆ.ಜಿ ಬೇಸಿನ್ ಜೊತೆಗೆ ಹರಿಯಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಂಜಾಬ್ ಮತ್ತು ಕರ್ನಾಟಕದಾದ್ಯಂತ ಹರಡಿರುವ ತೈಲ ಮತ್ತು ಅನಿಲ ಕ್ಷೇತ್ರದ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ.
* ನಮಾಮಿ ಗಂಗೆ ಯೋಜನೆಯಡಿ 2,190 ಕೋಟಿ ಮೌಲ್ಯದ 12 ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ಇವುಗಳಲ್ಲಿ ಪಾಟ್ನಾ, ಸೋನೆಪುರ, ನೌಗಾಚಿಯಾ ಮತ್ತು ಚಾಪ್ರಾದಲ್ಲಿನ ಒಳಚರಂಡಿ ಸಂಸ್ಕರಣಾ ಘಟಕಗಳು ಸೇರಿವೆ.
* ಪಾಟ್ನಾದಲ್ಲಿ 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಯೂನಿಟಿ ಮಾಲ್‌ಗೆ ಶಂಕುಸ್ಥಾಪನೆ ನೆರವೇರಿಸಿದರು. ಇದು 'ಬಂದು ಜಿಲ್ಲೆ, ಒಂದು ಉತ್ಪನ್ನ' ಯೋಜನೆಗೆ ಉತ್ತೇಜನ ನೀಡುತ್ತದೆ.
* ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಹೇಳಿಕೆಯ ಪ್ರಕಾರ ಜಾರ್ಖಂಡ್‌ನಲ್ಲಿ, ಪ್ರಧಾನಿಯವರು ರೈಲು, ವಿದ್ಯುತ್, ಕಲ್ಲಿದ್ದಲು ಮತ್ತು ರಸಗೊಬ್ಬರ ಕ್ಷೇತ್ರಗಳಿಗೆ ಸಂಬಂಧಿಸಿದ ಬಹು ಅಭಿವೃದ್ಧಿ ಯೋಜನೆಗಳು ಹಾಗೂ ಬಂಗಾಳದ ಆರಂಭಾಗ್‌ನಲ್ಲಿ ರೈಲು, ಬಂದರುಗಳು, ತೈಲ ಪೈಪ್‌ಲೈನ್, ಎಲ್‌ಪಿಜಿ ಪೂರೈಕೆ ಮತ್ತು ತ್ಯಾಜ್ಯನೀರಿನ ಸಂಸ್ಕರಣೆಗೆ ಸಂಬಂಧಿಸಿದ ಬಹು ಅಭಿವೃದ್ಧಿ ಯೋಜನೆಗಳನ್ನೂ ಪ್ರಾರಂಭಿಸಲಿದ್ದಾರೆ.
* ಕೃಷ್ಣನಗರದಲ್ಲಿ ಅವರು ಪುರುಲಿಯಾ ಜಿಲ್ಲೆಯ ರಘುನಾಥಪುರದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ ವಿದ್ಯುತ್, ರೈಲು ಮತ್ತು ರಸ್ತೆ ವಲಯದ ಬಹುವಿಧದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಶನಿವಾರ, 02 ಮಾರ್ಚ್ 2024
5:31 ಅಪರಾಹ್ನ
Daily PDF
21,400 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಅವರಿಂದ ಚಾಲನೆ
Authored by:
Bhagya R K