* 128 ವರ್ಷಗಳ ನಂತರ ಮೊದಲಬಾರಿಗೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರಿಸಲಾಗುತ್ತಿದೆ. 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಪುರುಷರು ಮತ್ತು ಮಹಿಳೆಯರ ಕ್ರಿಕೆಟ್ ಟೂರ್ನಿ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅಧಿಕೃತವಾಗಿ ಘೋಷಿಸಿದೆ.
* ಪ್ರತಿ ವಿಭಾಗದಲ್ಲಿ 90 ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಈ ಮಹತ್ವದ ಬಹು-ಕ್ರೀಡಾ ಮೇಳದಲ್ಲಿ ಟಿ20 ಸ್ವರೂಪದ ಕ್ರಿಕೆಟ್ ಆಡಲಾಗುವುದು.
* ಕ್ರಿಕೆಟ್ ಜೊತೆಗೆ ಸ್ಟ್ಯಾಶ್, ಫ್ಲ್ಯಾಗ್ ಫುಟ್‌ಬಾಲ್, ಬೇಸ್‌ಬಾಲ್, ಲ್ಯಾಕ್ರೋಸ್ ಕ್ರೀಡೆಗಳನ್ನೂ ಈ ಬಾರಿ ಒಲಿಂಪಿಕ್ಸ್‌ಗೆ ಸೇರಿಸಲಾಗಿದೆ.
* ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ಗೆ ಅರ್ಹತಾ ನಿಯಮಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ. ಟಿ20 ಮಾದರಿಯ ಕ್ರಿಕೆಟ್ ಅನ್ನು ಸುದೀರ್ಘ ದೇಶಗಳು ಆಡುತ್ತಿರುವುದರಿಂದ ಅರ್ಹತಾ ಪ್ರಕ್ರಿಯೆ ಚುರುಕಾಗಿ ನಡೆಯಬೇಕಾಗಿದೆ.
* ಆತಿಥೇಯ ಯುಎಸ್ಎ ನೇರ ಪ್ರವೇಶ ಪಡೆಯುವ ಸಾಧ್ಯತೆಯಿದೆ. ಒಟ್ಟು ಆರು ತಂಡಗಳು ಭಾಗವಹಿಸಲಿವೆ.
* ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 12 ಪೂರ್ಣ ಸದಸ್ಯರ ತಂಡಗಳನ್ನು ಒಲಿಂಪಿಕ್ಸ್ ಸಮಿತಿಗೆ ಶಿಫಾರಸ್ಸು ಮಾಡಲಿದ್ದು, ಈ ತಂಡಗಳ ಶ್ರೇಯಾಂಕದ ಆಧಾರ ಮೇಲೆ 6 ತಂಡಗಳನ್ನು ಒಲಿಂಪಿಕ್ಸ್ ಅಂಗಳದಲ್ಲಿ ಕಣಕ್ಕಿಳಿಸಲಾಗುತ್ತದೆ ಎಂದು ವರದಿಯಾಗಿದೆ.
* 2022ರ ಬರ್ಮಿಂಗ್‌ಹ್ಯಾಂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್ ಸೇರಿಸಲಾಗಿತ್ತು. ಇದರಲ್ಲಿ ಆಸ್ಟ್ರೇಲಿಯಾ ಚಿನ್ನ ಗೆದ್ದರೆ, ಭಾರತ ಬೆಳ್ಳಿ ಪಡೆದಿತ್ತು. 2023ರ ಚೀನಾದ ಹ್ಯಾಂಗ್ ಝೂನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷ ಮತ್ತು ಮಹಿಳಾ ತಂಡಗಳು ಚಿನ್ನದ ಪದಕ ಗೆದ್ದಿದ್ದವು.
2028 ಒಲಿಂಪಿಕ್ಸ್ ಕ್ರಿಕೆಟ್ ಟೂರ್ನಿ : ಆರು ತಂಡಗಳಿಗೆ ಅವಕಾಶ
Published by Jyoti Angadi
11 ಏಪ್ರಿಲ್ 2025