* ಸಂಪತ್ತನ್ನು ಪತ್ತೆಹಚ್ಚುವ ಇನ್‌ಫಾರ್ಮಾ ಕನೆಕ್ಟ್ ಅಕಾಡೆಮಿಯ ವರದಿಯ ಪ್ರಕಾರ, 2027ರ ವೇಳೆಗೆ ಎಲಾನ್ ಮಸ್ಕ್ ವಿಶ್ವದ ಮೊದಲ ಟ್ರಿಲಿಯನೇರ್ ಆಗುವ ಹಾದಿಯಲ್ಲಿದ್ದಾರೆ.
* ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿ ಟೆಸ್ಲಾ, ಖಾಸಗಿ ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ಮುಖ್ಯಸ್ಥರಾಗಿರುವ ಮಸ್ಕ್ ಅವರ ಸಂಪತ್ತು “$195 ಶತಕೋಟಿ ನಿವ್ವಳ ಮೌಲ್ಯದೊಂದಿಗೆ, ಪ್ರತಿ ವರ್ಷ ಸರಾಸರಿ 109.88% ದರದಲ್ಲಿ ಬೆಳೆಯುತ್ತಿದೆ ಎಂದು ಅಕಾಡೆಮಿ ತಿಳಿಸಿದೆ.
* ಕೈಗಾರಿಕಾ ಸಂಘಟಿತ ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಗೌತಮ್ ಅದಾನಿ ಅವರ ಸಂಪತ್ತು ಸರಾಸರಿ ವಾರ್ಷಿಕ ದರದಲ್ಲಿ 123% ರಷ್ಟು ಬೆಳೆಯುತ್ತಿದೆ ಮತ್ತು ಇದು ಇನ್ನೂ ಕೆಲವು ವರ್ಷಗಳ ಕಾಲ ಇದೇ ವೇಗದಲ್ಲಿ ಮುಂದುವರಿದರೆ, ನಂತರ 2028 ರ ವೇಳೆಗೆ ಜಗತ್ತಿನ ಎರಡನೇ ಟ್ರಿಲಿಯನೇರ್ ಎನಿಸಿಕೊಳ್ಳುವ ಶ್ರೇಯ ಭಾರತದ ಗೌತಮ್ ಅದಾನಿ ಅವರದಾಗಲಿದೆ.
* ವಿಶ್ವದ ಬಿಲಿಯನೇರ್‌ಗಳ (ಶತಕೋಟಿ ಡಾಲರ್ ಒಡೆಯರು) ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿರುವ ಗೌತಮ್ ಅದಾನ ₹8.39 ಲಕ್ಷ ಕೋಟಿಯಷ್ಟು ಸಂಪತ್ತು ಹೊಂದಿದ್ದಾರೆ.
* ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಸದ್ಯ ₹9.31 ಲಕ್ಷ ಕೋಟಿ ಸಂಪತ್ತನ್ನು ಹೊಂದಿದ್ದಾರೆ. 2033 ವೇಳೆಗೆ ಟ್ರಿಲಿಯನೇರ್ ಆಗಲಿದ್ದಾರೆ ಎಂದು ಇನ್‌ಫಾರ್ಮಾ ಕನೆಕ್ಸ್ ಅಕಾಡೆಮಿಯ ವರದಿ ಅಂದಾಜಿಸಿದೆ.
ಮಂಗಳವಾರ, 10 ಸೆಪ್ಟೆಂಬರ್ 2024
11:02 ಪೂರ್ವಾಹ್ನ
Daily PDF
2027ರ ವೇಳೆಗೆ ಎಲಾನ್ ಮಸ್ಕ್ ವಿಶ್ವದ ಮೊದಲ ಟ್ರಿಲಿಯನೇರ್
Authored by:
Jyoti Angadi