* 2026ರ ಏಷ್ಯನ್ ಗೇಮ್ಸ್ ಜಪಾನ್‌ನ ಐಚಿ-ನಗೊಯಾದಲ್ಲಿ ನಡೆಯಲಿದ್ದು, ತೇಲುವ ಕ್ರೀಡಾ ಗ್ರಾಮವೊಂದನ್ನು ಅಲ್ಲಿ ಸ್ಥಾಪಿಸಲು ಆಯೋಜಕರು ಯೋಜನೆ ರೂಪಿಸಿದ್ದಾರೆ.
* ಕಟ್ಟಡ ನಿರ್ಮಾಣಕ್ಕಿಂತ ವೆಚ್ಚ ಉಳಿತಾಯಕ್ಕಾಗಿ, ಆಯೋಜಕರು ಐಷಾರಾಮಿ ಕ್ರೂಸ್ ಹಡಗಿನಲ್ಲೇ ಸುಮಾರು 4600 ಕ್ರೀಡಾಪಟು ಹಾಗೂ ಅಧಿಕಾರಿಗಳಿಗೆ ವಾಸದ ವ್ಯವಸ್ಥೆ ಮಾಡಲು ನಿರ್ಧಾರ ಮಾಡಿದ್ದಾರೆ.
* ಈ ಹಡಗಿನೊಳಗೇ ಜಿಮ್ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಉದ್ದೇಶಿಸಿದ್ದಾರೆ.
* ಈ ಕ್ರೀಡಾಕೂಟದಲ್ಲಿ 45 ದೇಶಗಳಿಂದ ಅಥ್ಲೀಟ್ ಗಳು, ಕೋಚ್ ಗಳು ಹಾಗೂ ಅಧಿಕಾರಿಗಳು ಸೇರಿ ಸುಮಾರು 15000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
* ಸುಮಾರು 2400ಕ್ಕೂ ಹೆಚ್ಚು ಮಂದಿಗೆ ಹಡಗುಕಟ್ಟೆಯ ಮ್ಯಾದಿರುವ ರೆಸಾರ್ಟ್‌ಗಳಲ್ಲಿ ವಾಸದ ವ್ಯವಸ್ಥೆ ಮಾಡಲಾಗುತ್ತದೆ. ಉಳಿದವರಿಗೆ ತಾತ್ಕಾಲಿಕ ಹಡಗು ಕಂಟೇನರ್‌ಗಳಲ್ಲಿ ಕೊಠಡಿಗಳನ್ನು ನಿರ್ಮಿಸಲು ಯೋಜಿಸಲಾಗಿದೆ.
* ಈ ಗೇಮ್ಸ್ 2026ರ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆಯಲಿದ್ದು, ಚಂಡಮಾರುತದ ಸಾಧ್ಯತೆ ಇರುವುದರಿಂದ ಅದರ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
2026ರಲ್ಲಿಏಷ್ಯನ್ ಗೇಮ್ಸ್ನಲ್ಲಿ ತೇಲುವ ಕ್ರೀಡಾ ಗ್ರಾಮ ಯೋಜನೆ
Published by Jyoti Angadi
17 ಮೇ 2025