* ನಾಸಾ-ಇಸ್ರೋ ಸಹಯೋಗದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಯ ನೌಕೆ 2025ರ ಬದಲಿಗೆ 2026ರ ವೇಳೆಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿದೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥನ್ ಅವರು ಹೇಳಿದ್ದಾರೆ. 'ಇ೦ಡಿಯಾ ರೇಡಿಯೋ' ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ಬಹಿರಂಗಪಡಿಸಿದ್ದಾರೆ.
* ಗಗನಯಾನ ಮಿಷನ್‌ಗೆ ಆಯ್ಕೆಯಾದ ನಾಲ್ವರಲ್ಲಿ ಒಬ್ಬರಾದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದಾರೆ. ಪ್ರಸ್ತುತ ಇವರು ಆಕ್ಸಿಯಮ್ ಸ್ಪೇಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
* ಸೋಮನಾಥನ್ ಅವರು ಗಗನಯಾನದ ಜತೆಗೆ ಇಸ್ರೋ ಕೈಗೊಳ್ಳುವ ಇನ್ನಿತರ ಬಾಹ್ಯಾಕಾಶ ಕಾರ್ಯಾಚರಣೆಗಳ ವೇಳಾಪಟ್ಟಿಯನ್ನೂ ಬಹಿರಂಗಪಡಿಸಿದ್ದಾರೆ.
* ಸ್ಯಾಂಪಲ್ ರಿಟರ್ನ್ ಮಷಿನ್ ಚಂದ್ರಯಾನ -4 ಅನ್ನು 2028ರಲ್ಲಿ ಉಡಾವಣೆ ಮಾಡಲಾಗುವುದು, ಭಾರತ- ಅಮೆರಿಕದ ಜಂಟಿ ನಿಸಾರ್ ಯೋಜನೆ 2025ರಲ್ಲಿ ಕಾರ್ಯಗತಗೊಳ್ಳಲಿದೆ ಎಂದು ಅವರು ವಿವರಿಸಿದ್ದಾರೆ.
* ಮುಂದಿನ ದಶಕದಲ್ಲಿ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಗೆ ಭಾರತದ ಕೊಡುಗೆಯನ್ನು ಪ್ರಸ್ತುತ ಇರುವ ಶೇ.2ರಷ್ಟಿಂದ ಶೇ.10ರಷ್ಟು ಹೆಚ್ಚಿಸುವುದಾಗಿ ಸೋಮನಾಥನ್ ಹೇಳಿದ್ದಾರೆ.
ಗುರುವಾರ, 31 ಅಕ್ಟೋಬರ್ 2024
1:30 ಅಪರಾಹ್ನ
Daily PDF
2026 ಕ್ಕೆ ಮಾನವ ಸಹಿತ ಗಗನಯಾನ : ಇಸ್ರೋ
Authored by:
Jyoti Angadi