* 2025–26ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿ ರಾಜ್ಯದ 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ “ಸೇತುಬಂಧ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.
* ಈ ಕಾರ್ಯಕ್ರಮದ ಉದ್ದೇಶ ಮಕ್ಕಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾ ಮಟ್ಟವನ್ನು ಗುರುತಿಸಿ ಮುಂದಿನ ತರಗತಿಗೆ ಸಿದ್ಧಗೊಳಿಸುವುದು.
* ವಿದ್ಯಾಪ್ರವೇಶ ಹಂತದಲ್ಲಿ ಮೊದಲ 40 ದಿನಗಳು ಹಾಗೂ 2ರಿಂದ 10ನೇ ತರಗತಿಗಳಿಗೆ ಮೊದಲ 15 ದಿನಗಳ ಕಾಲ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತದೆ.
* ತದನಂತರ, ತರಗತಿವಾರು ಹಾಗೂ ವಿಷಯವಾರು ಕಲಿಕಾ ಸಾಮಾಗ್ರಿ ಕನ್ನಡ, ಇಂಗ್ಲಿಷ್ ಹಾಗೂ ಉರ್ದು, ಮರಾಠಿ, ತೆಲುಗು, ತಮಿಳು ಮೊದಲಾದ ಭಾಷೆಗಳಲ್ಲಿ ಡಿಎಸ್‌ಇಆರ್‌ಟಿ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಅದನ್ನು ಬಳಸಿ ಕಾರ್ಯಾಚರಣೆ ನಡೆಸಬೇಕೆಂದು ನಿರ್ದೇಶಕರು ತಿಳಿಸಿದ್ದಾರೆ.
ಶನಿವಾರ, 24 ಮೇ 2025
3:25 ಅಪರಾಹ್ನ
Daily PDF
2025–26: ಶಾಲಾ ಆರಂಭಕ್ಕೆ ರಾಜ್ಯದ ಮಕ್ಕಳಿಂದ ‘ಸೇತುಬಂಧ’ ಆರಂಭ
Authored by:
Jyoti Angadi