* ಸರಕು ಮತ್ತು ಸೇವಾ ತೆರಿಗೆ(GST) ಮೂಲಕ 2024ರ ಡಿಸೆಂಬರ್‌ನಲ್ಲಿ ₹1.77 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ.
* 2023ರ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದ ವರಮಾನಕ್ಕೆ ಹೋಲಿಸಿದರೆ ಶೇ 7.3ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ(ಜನವರಿ 01) ತಿಳಿಸಿದೆ.
* 1,76,857 ಕೋಟಿ ರೂ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಕೇಂದ್ರದ ಜಿಎಸ್​ಟಿ 32,836 ಕೋಟಿ ರೂ ಇದೆ. ರಾಜ್ಯ ಜಿಎಸ್​ಟಿ 40,499 ಕೋಟಿ ರೂ, ಐಜಿಎಸ್​ಟಿ 47,783 ಕೋಟಿ ರೂ, ಹಾಗೂ ಸೆಸ್ 11,471 ಕೋಟಿ ರೂ ಆಗಿದೆ.
* 2024ರ ಡಿಸೆಂಬರ್ ತಿಂಗಳಲ್ಲಿ ಆಂತರಿಕ ವಹಿವಾಟುಗಳ ಮೂಲಕ ಸಂಗ್ರಹವಾದ ಜಿಎಸ್​ಟಿ 1.32 ಲಕ್ಷ ಕೋಟಿ ರೂ. ಹಿಂದಿನ ವರ್ಷದಕ್ಕಿಂತ ಇದರಲ್ಲಿ ಶೇ. 8.4ರಷ್ಟು ಹೆಚ್ಚಳ ಆಗಿದೆ. ಇನ್ನು, ಆಮದುಗಳಿಂದ ಬಂದಿರುವ ತೆರಿಗೆ 44,268 ಕೋಟಿ ರೂ ಇದೆ.
* 2024ರಲ್ಲಿ ಕೊನೆಯ ನಾಲ್ಕು ತಿಂಗಳ ಜಿಎಸ್​ಟಿ ಸಂಗ್ರಹ:
ಸೆಪ್ಟೆಂಬರ್: ₹ 1,73,240 ಕೋಟಿ 
ಅಕ್ಟೋಬರ್: ₹ 1,87,346 ಕೋಟಿ
ನವೆಂಬರ್: ₹ 1,82,269 ಕೋಟಿ 
ಡಿಸೆಂಬರ್: ₹ 1,76,857 ಕೋಟಿ
* 2024-25  ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ (ಏಪ್ರಿಲ್​ನಿಂದ ಡಿಸೆಂಬರ್) 16,33,569 ಕೋಟಿ ರೂ ಜಿಎಸ್​ಟಿ ಸಂಗ್ರಹವಾಗಿದೆ.
* ಕಳೆದ ವರ್ಷದಕ್ಕಿಂತ ಶೇ. 9.10ರಷ್ಟು ಹೆಚ್ಚು ತೆರಿಗೆ ಬಂದಿದೆ. ಆದರೆ 2024-25ರ ಹಣಕಾಸು ವರ್ಷಕ್ಕೆ ನಿಗದಿ ಪಡಿಸಿರುವ ಗುರಿಗಿಂತ ಜಿಎಸ್​ಟಿ ಸಂಗ್ರಹ ಶೇ. 19ರಷ್ಟು ಕಡಿಮೆ ಇದೆ.