* ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡವನ್ನು ಏಪ್ರಿಲ್ 30 (ಮಂಗಳವಾರ) ರಂದು ಬಿಸಿಸಿಐ ಪ್ರಕಟಿಸಿದೆ.
* ನಾಯಕ ರೋಹಿತ್ ಶರ್ಮಾ, ಹೆಡ್ಕೋಚ್ ರಾಹುಲ್ ದ್ರಾವಿಡ್ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿ ತಂಡವನ್ನು ಅಂತಿಮಗೊಳಿಸಿದರು. ಮಿನಿ ಸಮರದಲ್ಲಿ ಆಡಲು ಅಮೆರಿಕ ವಿಮಾನ ಏರಲಿರುವ 15 ಸದಸ್ಯರ ತಂಡವನ್ನು ಅಳೆದುತೂಗಿ ಆಯ್ಕೆ ಮಾಡಲಾಗಿದೆ.
* ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಹಾಗೂ ಯುಜ್ವೇಂದ್ರ ಚಹಲ್ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
* ಟಿ20 ವಿಶ್ವಕಪ್ಗೆ ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಚಹಾಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
- ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ
- ನಾಲ್ವರು ಸ್ಪಿನ್ನರ್‌ಗಳು: ಇಬ್ಬರು ಮುಷ್ಠಿ ಸ್ಪಿನ್ನರ್‌ಗಳು ಹಾಗೂ ಇನ್ನಿಬ್ಬರು ಫಿಂಗರ್ ಸ್ಪಿನ್ನರ್‌ಗಳು
- ಮೂವರು ವಿಶೇಷ ವೇಗಿಗಳು: ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್
- ಇಬ್ಬರು ವಿಕೆಟ್ ಕೀಪರ್‌ಗಳು: ಕೆಎಲ್ ರಾಹುಲ್ ಬದಲು ರಿಷಭ್ ಪಂತ್, ಸಂಜು ಸ್ಯಾಮ್ಸನ್ ಆಯ್ಕೆ
- ರಿಂಕು ಸಿಂಗ್ ಬದಲಿ ಮ್ಯಾಚ್ ಫಿನಿಷಿಂಗ್ ಬ್ಯಾಟ್ಸ್‌ಮನ್ ಆಗಿ ಶಿವಂ ದುಬೆ ಆಯ್ಕೆ
- ನಾಯಕ ರೋಹಿತ್ ಶರ್ಮಾಗೆ ಹಾರ್ದಿಕ್ ಪಾಂಡ್ಯ ಉಪ ನಾಯಕ
* ಭಾರತವು ಜೂನ್ 05, 2024 ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸುತ್ತದೆ, ನಂತರ ಅದೇ ಸ್ಥಳದಲ್ಲಿ ಜೂನ್ 09, 2024 ರಂದು ಪಾಕಿಸ್ತಾನದ ವಿರುದ್ಧ ಮಾರ್ಕ್ಯೂ ಘರ್ಷಣೆಯನ್ನು ನಡೆಸಲಿದೆ. ಭಾರತವು ಜೂನ್ 12 ಮತ್ತು 15 ರಂದು ಕ್ರಮವಾಗಿ ಯುಎಸ್ಎ ಮತ್ತು ಕೆನಡಾ ವಿರುದ್ಧ ಆಡಲಿದೆ.
2024ರ ಐಸಿಸಿ ಟಿ20 ವಿಶ್ವಕಪ್ ಗಾಗಿ ಬಲಿಷ್ಠ ಭಾರತ ತಂಡ ಪ್ರಕಟ
Published by Bhagya R K
01 ಮೇ 2024