* ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯ ಜಂಟಿ ಆತಿಥ್ಯದಲ್ಲಿ 2024ರಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನೇಪಾಳ ಹಾಗೂ ಒಮಾನ್ ತಂಡಗಳು ಅರ್ಹತೆ ಗಿಟ್ಟಿಸಿಕೊಂಡಿವೆ.
* ನೇಪಾಳ ತಂಡ ಬರೋಬ್ಬರಿ 10 ವರ್ಷಗಳ ಬಳಿಕ ಟಿ20 ವಿಶ್ವಕಪ್‌ಗೆ ಅರ್ಹತೆ ಸಂಪಾಧಿಸಿದ್ದರೆ, ಒಮಾನ್ ತಂಡ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡುವ ಅವಕಾಶ ಪಡೆದು ಇತಿಹಾಸ ನಿರ್ಮಿಸಿದೆ.
* ನವೆಂಬರ್ 03 ರಂದು ನಡೆದ ಏಷ್ಯನ್ ಅರ್ಹತಾ ಸುತ್ತಿನ ಸೆಮಿಫೈನಲ್‌ನಲ್ಲಿ ನೇಪಾಳ ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು 8 ವಿಕೆಟ್‌ಗಳಿಂದ ಸೋಲಿಸಿದರೆ, ಒಮನ್ ನವೆಂಬರ್ 03 ರಂದು (ಶುಕ್ರವಾರ) ಬಹ್ರೇನ್ ಅನ್ನು 10 ವಿಕೆಟ್‌ಗಳ ಅಂತರದಿಂದ ಸೋಲಿಸಿತು.
* 2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಆದರೆ 2024ರ ಟೂರ್ನಿಯಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಹೀಗಾಗಿ ಅರ್ಹತಾ ಪಂದ್ಯಗಳನ್ನು ನಡೆಸಲಾಗುತ್ತದೆ.
* ಟೂರ್ನಿಗೆ ಇದುವರೆಗೆ 18 ತಂಡಗಳು ಅರ್ಹತೆ ಪಡೆದಿವೆ. ನವೆಂಬರ್ 22 ರಿಂದ 30 ರವರೆಗೆ ನಮೀಬಿಯಾದಲ್ಲಿ ನಡೆಯಲಿರುವ ಆಫ್ರಿಕಾ ಕ್ವಾಲಿಫೈಯರ್‌ನಿಂದ ಕೊನೆಯ ಎರಡು ಸ್ಥಾನಗಳನ್ನು ನಿರ್ಧರಿಸಲಾಗುತ್ತದೆ.
* ಈಗಾಗಲೇ ಅಗ್ರ 8 ತಂಡಗಳು ಸೇರಿದಂತೆ ಹನ್ನೆರಡು ದೇಶಗಳು ಸ್ಪರ್ಧೆಗೆ ಅರ್ಹತೆ ಪಡೆದಿವೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನೆದರ್ಲ್ಯಾಂಡ್ಸ್, ನ್ಯೂಜಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ. ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ತಂಡಗಳು ಸ್ಥಾನ ಪಡೆದಿವೆ.
* 2024ರ ಟಿ-20 ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ತಂಡಗಳು
- ಆಸ್ಟ್ರೇಲಿಯ, ಇಂಗ್ಲೆಂಡ್, ಭಾರತ, ನೆದರ್‌ಲ್ಯಾಂಡ್ಸ್, ನ್ಯೂಝಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಐರ್‌ಲ್ಯಾಂಡ್,ಸ್ಕಾಟ್‌ಲ್ಯಾಂಡ್ ವೆಸ್ಟ್‌ಇಂಡೀಸ್(ಆತಿಥೇಯ), ಅಮೆರಿಕ(ಆತಿಥೇಯ), ಪಪುವಾ ನ್ಯೂ ಗಿನಿ, ಕೆನಡ, ನೇಪಾಳ ಹಾಗೂ ಒಮಾನ್.
ಶನಿವಾರ, 04 ನವೆಂಬರ್ 2023
10:47 ಪೂರ್ವಾಹ್ನ
Daily PDF
2024 ರ ಟಿ 20 ವಿಶ್ವಕಪ್ ಗೆ ಅರ್ಹತೆ ಪಡೆದ ನೇಪಾಳ ಮತ್ತು ಒಮಾನ್
Authored by:
Bhagya R K