* ಭಾರತದ 22 ವರ್ಷದ ಶೂಟರ್ ಮನು ಭಾಕರ್ ಅವರು ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಜುಲೈ 28 ರಂದು ಕಂಚಿನ ಪದಕ ಜಯಿಸುವ ಮೂಲಕ ಶೂಟಿಂಗ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಸ್ಪರ್ಧಿ ಎಂಬ ದಾಖಲೆ ನಿರ್ಮಿಸಿದ್ದಾರೆ.
* ಕೇವಲ 0.1 ಪಾಯಿಂಟ್‌ಗಳ ಅಂತರದಿಂದ ಭಾಕರ್ ಗೆ ಬೆಳ್ಳಿ ಪದಕ ಕೈತಪ್ಪಿದೆ. ರಿಪಬ್ಲಿಕ್ ಆಫ್ ಕೊರಿಯಾದ ಓ ಯೆ ಜಿನ್ ಅವರು 243.2 ಅಂಕ ಗಳಿಸುವ ಮೂಲಕ ಚಿನ್ನ ಗೆದ್ದಿದ್ದು, ದಕ್ಷಿಣ ಕೊರಿಯಾದ ಕಿಮ್ ಯೆಜಿ ಬೆಳ್ಳಿ ಪದಕ ಗೆದ್ದಿದ್ದಾರೆ.
* ಇದು ಮಹಿಳಾ ಶೂಟಿಂಗ್‌ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಪದಕವಾಗಿದೆ. ಒಲಿಂಪಿಕ್ ಶೂಟಿಂಗ್‌ನಲ್ಲಿ ಭಾರತದ 12 ವರ್ಷಗಳ ಪದಕದ ಬರವನ್ನು ಕೊನೆಗೊಳಿಸಿದರು.
* 10 ಮೀ ಏರ್ ಪಿಸ್ತೂಲ್ ಫೈನಲ್ನಲ್ಲಿ 221.7 ಅಂಕಗಳೊಂದಿಗೆ 3ನೇ ಸ್ಥಾನ ಪಡೆದ ಮಹಿಳಾ ಶೂಟರ್, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
* 2012 ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ಕೊನೆಯ ಶೂಟಿಂಗ್ ಪದಕಗಳು ಬಂದವು, ಅಲ್ಲಿ ವಿಜಯ್ ಕುಮಾರ ಪುರುಷರ 25 ಮೀ ರಾಪಿಡ್-ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು ಮತ್ತು ಗಗನ್ ನಾರಂಗ್ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದರು.
* ಮನು ಭಾಕರ್ ಅವರು ಪ್ಯಾರಿಸ್ ನಲ್ಲಿ ಇನ್ನು 2 ಪದಕ ಗೆಲ್ಲುವ ಅವಕಾಶ ಹೊಂದಿದ್ದಾರೆ. ಜುಲೈ 29 ರಂದು ಸರಬ್ಜೋತ್ ಸಿಂಗ್ ಅವರ ಜೊತೆ 10 ಮೀ ಏರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಸ್ಪರ್ದಿಸಲಿದ್ದಾರೆ. ಹಾಗೂ ಆಗಸ್ಟ್ 2 ರಂದು 25 ಮೀ. ಪಿಸ್ತೂಲ್ ವಿಭಾಗದಲ್ಲಿ ಸೆಣಸಾಡಲಿದ್ದಾರೆ.
* ಭಾರತೀಯ ಒಲಿಂಪಿಕ್ಸ್ ಮತ್ತು ಶೂಟಿಂಗ್ ಇತಿಹಾಸದಲ್ಲಿ ಗಣ್ಯರ ಪಟ್ಟಿ :
- ರಾಜ್ಯವರ್ಧನ್ ಸಿಂಗ್ ರಾಥೋಡ್ - ಬೆಳ್ಳಿ ಪದಕ, ಅಥೆನ್ಸ್ ಒಲಿಂಪಿಕ್ ಗೇಮ್ಸ್ 2004
- ಅಭಿನವ್ ಬಿಂದ್ರಾ - 2008 ರಲ್ಲಿ ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ.
- ವಿಜಯ್ ಕುಮಾರ್ - 2012 ರಲ್ಲಿ ಲಂಡನ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ
- ಗಗನ್ ನಾರಂಗ್ - 2012 ರಲ್ಲಿ ಲಂಡನ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕ
ಸೋಮವಾರ, 29 ಜುಲೈ 2024
10:55 ಪೂರ್ವಾಹ್ನ
Daily PDF
2024 ರ ಪ್ಯಾರಿಸ್ ಒಲಿಂಪಿಕ್ಸ್ : ಭಾರತಕ್ಕೆ ಮೊದಲ ಪದಕ! ಶೂಟಿಂಗ್‌ನಲ್ಲಿ ಐತಿಹಾಸಿಕ ಮೆಡಲ್ ಗೆದ್ದ ಮನು ಭಾಕರ್
Authored by:
Bhagya R K