* 2023ರ ಸ್ಥಿತಿ ಕುರಿತು ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಆಹಾರ ಬಿಕಟ್ಟು ಜಾಗತಿಕ ವರದಿ ಪ್ರಕಾರ ವಿಶ್ವದ 59 ದೇಶಗಳ ಸುಮಾರು 28.2 ಕೋಟಿ ಜನರು 2023ರಲ್ಲಿ ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ. 2022ರ ತೀವ್ರ ಹಸಿವಿನ ವರದಿಗಿಂತ 2.4 ಕೋಟಿ ಹೆಚ್ಚಿನ ಜನರು ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ.
* 2023ರ ಆಹಾರ ಬಿಕಟ್ಟು ಜಾಗತಿಕ ವರದಿಯ ಪ್ರಕಾರ ಯುದ್ದದಿಂದ ಹಾನಿಗೊಳಗಾದ ಗಾಜಾ, ಕ್ಷಾಮಪೀಡಿತ ಪ್ರದೇಶವಾಗಿದ್ದು, ಗಾಜಾ ಪಟ್ಟಿ ಮತ್ತು ಸೂಡಾನ್ ನಲ್ಲಿ ಆಹಾರದ ಭದ್ರತೆ ತೀವ್ರವಾಗಿ ಹದಗೆಟ್ಟಿದೆ.
* ಆಹಾರ ಬಿಕಟ್ಟು ಜಾಗತಿಕ ವರದಿಯನ್ನು 2016ರಲ್ಲಿ ಪ್ರಾರಂಭಿಸಲಾಯಿತು. ಪ್ರತಿ ವರ್ಷ ಸಾಕಷ್ಟು ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ ಎಂದು ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಪ್ರತಿಕ್ರಿಯಿಸಿದ್ದಾರೆ.
* ಕ್ಷಾಮ ಎದುರಿಸುತ್ತಿರುವವರಲ್ಲಿ ಶೇ.80ಕ್ಕಿಂತ ಹೆಚ್ಚು ಜನರು (5.77 ಲಕ್ಷ ಜನರು) ಗಾಜಾದಲ್ಲಿದ್ದಾರೆ. ದಕ್ಷಿಣ ಸುಡಾನ್, ಬುರ್ಕಿನಾ ಫಾಸೊ, ಸೊಮಾಲಿಯಾ ಮತ್ತು ಮಾಲಿಯಲ್ಲಿ ಸಾವಿರಾರು ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ಮ್ಯಾಕ್ಸಿಮೊ ಟೊರೆರೊ ಅವರು ತಿಳಿಸಿದ್ದಾರೆ .
* ಆಫ್ರಿಕಾದ ಪೂರ್ವದಲ್ಲಿ ಕೆಲವೆಡೆ ಪ್ರವಾಹ, ಮಳೆ ಕೊರತೆ, ದಕ್ಷಿಣದ ಮಲಾವಿ, ಜಾಂಬಿಯಾ, ಜಿಂಬಾಬೈಯಲ್ಲಿ ಬರವಿದ್ದು 2024ರಲ್ಲಿ ಆಹಾರ ಕೊರತೆಯಾಗಲಿದೆ ಎಂದು ಆಹಾರ ಬಿಕಟ್ಟು ಜಾಗತಿಕ ವರದಿಯ ತಿಳಿಸಿದೆ.
2023ರ ಸ್ಥಿತಿ ಕುರಿತು ವಿಶ್ವಸಂಸ್ಥೆ ವರದಿ : 59 ದೇಶಗಳ 28.2 ಕೋಟಿ ಜನರಲ್ಲಿ ತೀವ್ರ ಹಸಿವು
Published by Akshata Halli
27 ಏಪ್ರಿಲ್ 2024