* ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ʼವಾರ್ಷಿಕ ಗೌರವ ಪ್ರಶಸ್ತಿʼ ಮತ್ತು ʼಸಾಹಿತ್ಯಶ್ರೀ ಪ್ರಶಸ್ತಿʼಗಳು ಪ್ರಕಟಗೊಂಡಿದ್ದು, ಐವರು ವಾರ್ಷಿಕ ಗೌರವ ಪ್ರಶಸ್ತಿ, 10 ಮಂದಿ ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
* ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 7ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆಯಲ್ಲಿ ತಿಳಿಸಿದೆ.
* 2023ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತಿಗಳಾದ ಸಿ. ವೀರಣ್ಣ (ಬೆಂಗಳೂರು), ಶ್ರೀರಾಮ ಇಟ್ಟಣ್ಣವರ (ಬಾಗಲಕೋಟೆ), ಜಾಣಗೆರೆ ವೆಂಕಟರಾಮಯ್ಯ (ತುಮಕೂರು), ಎ.ಎಂ. ಮದರಿ (ಕೊಪ್ಪಳ) ಹಾಗೂ ಸಬಿಹಾ ಭೂಮಿಗೌಡ (ಮಂಗಳೂರು) ಆಯ್ಕೆಯಾಗಿದ್ದಾರೆ.
* ವಾರ್ಷಿಕ ಗೌರವ ಪ್ರಶಸ್ತಿಯು 50 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾರ್ಚ್ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆಯಲ್ಲಿ ತಿಳಿಸಿದೆ.
* 2023ನೇ ವರ್ಷದ 'ಸಾಹಿತ್ಯಶ್ರೀ' ಪ್ರಶಸ್ತಿ ಪುರಸ್ಕೃತರು : ಡಾ.ಎಂ.ಎಸ್.ಶೇಖರ್ - ಮೈಸೂರು, ಜಿ.ಎನ್.ಮೋಹನ್, ಬೆಂಗಳೂರು, ಡಾ.ಟಿ.ಎಸ್.ವಿವೇಕಾನಂದ – ತುಮಕೂರು, ಡಾ.ಜಯಶ್ರೀ ಕಂಬಾರ – ಬೆಳಗಾವಿ, ಪ್ರೊ.ನಿಜಲಿಂಗಪ್ಪ ಯಮನಪ್ಪ ಮಟ್ಟಿಹಾಳ – ಧಾರವಾಡ, ಡಾ.ಬಾಲಗುರುಮೂರ್ತಿ-ಕೋಲಾರ, ಪ್ರೊ.ಶಿವಗಂಗಾ ರುಮ್ಮ – ಕಲಬುರಗಿ, ಡಾ.ರೀಟಾ ರೀನಿ - ಬೆಂಗಳೂರು, ಡಾ.ಕಲೀಮ್ ಉಲ್ಲಾ- ಶಿವಮೊಗ್ಗ, ಡಾ.ವೆಂಕಟಗಿರಿ ದಳವಾಯಿ–ಬಳ್ಳಾರಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
* ಈ 'ಸಾಹಿತ್ಯಶ್ರೀ' ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.
* 2022ನೇ ವರ್ಷದ ಅಕಾಡೆಮಿಯ ದತ್ತಿ ಬಹುಮಾನ ಪುರಸ್ಕೃತರು: ಎಚ್.ಎಸ್.ಅನುಪಮಾ, ಫಾತಿಮಾ ರಲಿಯಾ, ಶಾರದಾ ವಿ. ಮೂರ್ತಿ, ವಿನಯಾ ನಂದಿಹಾಳ, ವಿಕ್ರಮ ವಿಸಾಜಿ, ಸುಶ್ರುತ್ ಜೆ.ಆರ್., ಅಕ್ಷತಾ ಕೃಷ್ಣಮೂರ್ತಿ, ಕೃಷ್ಣಮೂರ್ತಿ ಚಂದರ್, ಡಾ. ಶ್ರೀಧರ ಹೆಗಡೆ ಭದ್ರನ್ ಅವರು ದತ್ತಿ ಬಹುಮಾನಕ್ಕೆ ಭಾಜನರಾಗಿದ್ದಾರೆ.
2023 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ
Published by Bhagya R K
10 ಮಾರ್ಚ್ 2025