* 2023-24ನೇ ಸಾಲಿನಲ್ಲಿ ಸೆಲೆಬ್ರಿಟಿಗಳ ಪೈಕಿ ಅತಿ ಹೆಚ್ಚು ತೆರಿಗೆ ಕಟ್ಟುತ್ತಿರುವುದು ನಟ ಶಾರೂಕ್ ಖಾನ್ ಅವರು 92 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. 
* ಎರಡನೇ ಸ್ಥಾನದಲ್ಲಿ ದಳಪತಿ ವಿಜಯ್ ಅವರು 80 ಕೋಟಿ ರೂ. ತೆರಿಗೆ ಪಾವತಿಯಾಗಿದೆ. ಸಲ್ಮಾನ್ ಖಾನ್ 75 ಕೋಟಿ ರೂಪಾಯಿ, ಅಮಿತಾಭ್ ಬಚ್ಚನ್ 71 ಕೋಟಿ ಮತ್ತು ವಿರಾಟ್ ಕೊಹ್ಲಿ 66 ಕೋಟಿ ತೆರಿಗೆ ಕಟ್ಟಿ ನಂತರದ ಸ್ಥಾನಗಳಲ್ಲಿದ್ದಾರೆ. 
* ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 2023-24ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಆಟಗಾರರಾಗಿದ್ದಾರೆ. ಸ್ಪೋರ್ಟ್ಸ್ ಐಕಾನ್‌ಗಳಲ್ಲಿ ಒಬ್ಬರಾಗಿರುವ ಕೊಹ್ಲಿ ಅವರು 66 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ ಎಂದು ವರದಿಯಾಗಿದೆ. 
* ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. 
* ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರವೂ ಐಪಿಎಲ್‌ನಲ್ಲಿ ಮುಂದುವರೆದಿದ್ದಾರೆ. ಧೋನಿ ಕ್ರಿಕೆಟ್​ ಹೊರತುಪಡಿಸಿ ಜಾಹೀರಾತುಗಳಿಂದಲೂ ಹೆಚ್ಚಿನ ಆದಾಯ ಗಳಿಸುತ್ತಾರೆ. 2023-24ರ ಆರ್ಥಿಕ ವರ್ಷದಲ್ಲಿ ಧೋನಿ 38 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ.
* ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕ್ರಿಕೆಟ್​ನಿಂದ ನಿವೃತ್ತರಾದ ನಂತರವೂ ಪ್ರಮುಖ ತೆರಿಗೆದಾರರಾಗಿ ಉಳಿದಿದ್ದಾರೆ. 2024ರ ಆರ್ಥಿಕ ವರ್ಷದಲ್ಲಿ ತೆಂಡೂಲ್ಕರ್ 28 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. ಅವರು ಮೂರನೇ ಅತಿ ಹೆಚ್ಚು ತೆರಿಗೆ ಪಾವತಿಸುವ ಕ್ರಿಕೆಟಿಗರಾಗಿದ್ದಾರೆ. ಜಾಹೀರಾತು ಮತ್ತು ಹೂಡಿಕೆ ಸಚಿನ್​ ಅವರ ಆದಾಯ ಮೂಲವಾಗಿದೆ.
* ಸೌರವ್ ಗಂಗೂಲಿ 2024ರ ಹಣಕಾಸು ವರ್ಷದಲ್ಲಿ 23 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. ಸದ್ಯ ಗಂಗೂಲಿ ಕಾಮೆಂಟೇಟರ್ ಮತ್ತು ಕ್ರೀಡಾ ನಿರ್ವಾಹಕರಾಗಿ ಹಾಗೂ ಜಾಹೀರಾತುಗಳ ಮೂಲಕ ಆದಾಯ ಗಳಿಸುತ್ತಿದ್ದಾರೆ.
* ಆಲ್ ರೌಂಡ್ ಕೌಶಲ್ಯಕ್ಕೆ ಹೆಸರುವಾಸಿಯಾದ ಹಾರ್ದಿಕ್ ಪಾಂಡ್ಯ ಅವರು 13 ಕೋಟಿ ರೂಪಾಯಿ ತೆರಿಗೆ ಪಾವತಿಸಿ ಐದನೇ ಸ್ಥಾನದಲ್ಲಿದ್ದಾರೆ. ಮತ್ತೊಬ್ಬ ಕ್ರಿಕೆಟ್ ಆಟಗಾರ ರಿಷಬ್ ಪಂತ್ ಅವರು 10 ಕೋಟಿ ರೂ. ತೆರಿಗೆ ಪಾವತಿಸಿ ಆರನೇ ಸ್ಥಾನದಲ್ಲಿದ್ದಾರೆ.
ಅಜಯ್ ದೇವಗನ್ - 42 ಕೋಟಿ
ಎಂ.ಎಸ್.ಧೋನಿ - 38 ಕೋಟಿ
ರಣಬೀರ್ ಕಪೂರ್ - 36 ಕೋಟಿ
ಹೃತಿಕ್ ರೋಷನ್ - 29 ಕೋಟಿ
ಸಚಿನ್ ತೆಂಡೂಲ್ಕರ್ - 28 ಕೋಟಿ
ಕಪಿಲ್ ಶರ್ಮಾ - 26 ಕೋಟಿ
ಸೌರವ್ ಗಂಗೂಲಿ - 23 ಕೋಟಿ
ಕರೀನಾ ಕಪೂರ್ - 20 ಕೋಟಿ
ಶಾಹಿದ್ ಕಪೂರ್ - 14 ಕೋಟಿ
ಮೋಹನ್‌ ಲಾಲ್ - 14 ಕೋಟಿ
ಅಲ್ಲು ಅರ್ಜುನ್ - 14 ಕೋಟಿ