* 2019ನೇ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕಿಚ್ಚ ಸುದೀಪ್, ಅನುಪಮಾ ಗೌಡ ಮತ್ತು ಪಿ. ಶೇಷಾದ್ರಿ ಸೇರಿದಂತೆ ಹಲವರು ಗೌರವಿತರಾಗಿದ್ದಾರೆ.
* ಕರ್ನಾಟಕ ಸರ್ಕಾರ 2019ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಏಳು ವರ್ಷಗಳ ಬಳಿಕ ಮರುಚಾಲನೆಗೊಂಡ ಪ್ರಶಸ್ತಿಗಳಲ್ಲಿ, ಸುದೀಪ್ ಅವರಿಗೆ ಪೈಲ್ವಾನ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಮತ್ತು ಅನುಪಮಾ ಗೌಡ ಅವರಿಗೆ ತ್ರಯಂಬಕಂ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿವೆ.
* 25 ವಿಭಾಗಗಳಲ್ಲಿ ಪ್ರಶಸ್ತಿಗಳು ವಿತರಣೆಯಾಗಿದ್ದು, ನಿರ್ದೇಶಕ ಪಿ.ಶೇಷಾದ್ರಿ ಸೇರಿ ಹಲವರು ಗೌರವಿತರಾಗಿದ್ದಾರೆ.
* ಪಿ.ಶೇಷಾದ್ರಿ ನಿರ್ದೇಶನದ ‘ಮೋಹನ ದಾಸ’ ಅತ್ಯುತ್ತಮ ಚಿತ್ರ, ಡಾರ್ಲಿಂಗ್ ಕೃಷ್ಣನ ‘ಲವ್ ಮಾಕ್‌ಟೇಲ್’ ಮತ್ತು ‘ಅರ್ಘ್ಯಂ’ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿವೆ.
* ‘ಕನ್ನೇರಿ’ ಅತ್ಯುತ್ತಮ ಸಾಮಾಜಿಕ ಕಾಳಜಿ ಚಿತ್ರ, ‘ಇಂಡಿಯಾ vs ಇಂಗ್ಲೆಂಡ್’ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿದೆ.
* ಜಯಂತ್ ಕಾಯ್ಕಿಣಿ (ಕಥೆ), ಬರಗೂರು ರಾಮಚಂದ್ರಪ್ಪ (ಸಂಭಾಷಣೆ), ವಿ.ಹರಿಕೃಷ್ಣ (ಸಂಗೀತ), ಮತ್ತು ಜಿ.ಎಸ್.ಭಾಸ್ಕರ್ (ಛಾಯಾಗ್ರಹಣ) ಪ್ರಶಸ್ತಿಗೆ ಆಯ್ಕೆ.
* ಅತ್ಯುತ್ತಮ ಚಿತ್ರ ಮತ್ತು ನಿರ್ದೇಶನ ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ಅತ್ಯುತ್ತಮ ಎರಡನೇ ಚಿತ್ರ ₹75,000 ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ, ಅತ್ಯುತ್ತಮ ಮೂರನೇ ಚಿತ್ರ ₹50,000 ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ಹೊಂದಿದೆ. ಅತ್ಯುತ್ತಮ ಸಾಮಾಜಿಕ ಕಾಳಜಿ ಪ್ರಶಸ್ತಿ ₹75,000 ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ಹೊಂದಿವೆ.
* ನಂಜುಡೇಗೌಡ ಅವರ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿಯು 172 ಚಿತ್ರಗಳನ್ನು ಪರಿಗಣಿಸಿ ಪ್ರಶಸ್ತಿಗಳನ್ನು ಆಯ್ಕೆ ಮಾಡಿದೆ.
* 2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಸಂಪೂರ್ಣ ವಿವರ:
• ಮೊದಲನೇ ಅತ್ಯುತ್ತಮ ಚಿತ್ರ: ಮೋಹನದಾಸ
ನಿರ್ಮಾಪಕ: ಮಿತ್ರಚಿತ್ರ
ನಿರ್ದೇಶಕ: ಪಿ. ಶೇಷಾದ್ರಿ
• ಎರಡನೇ ಅತ್ಯುತ್ತಮ ಚಿತ್ರ: ಲವ್ ಮಾಕ್‌ಟೈಲ್
ನಿರ್ಮಾಪಕ: ಕೃಷ್ಣ ಟಾಕೀಸ್, ಎ.ನಾಗಪ್ಪ
ನಿರ್ದೇಶಕ: ಡಾರ್ಲಿಂಗ್ ಕೃಷ್ಣ
• 3 ಮೂರನೇ ಅತ್ಯುತ್ತಮ ಚಿತ್ರ: ಅರ್ಘ್ಯಂ
ನಿರ್ಮಾಪಕ: ಪರಮೇಶ್ವರಿ ಆರ್ಟ್ಸ್, ವೈ.ಶ್ರೀನಿವಾಸ್
ನಿರ್ದೇಶಕ: ವೈ. ಶ್ರೀನಿವಾಸ್
• ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕನ್ನೇರಿ
ನಿರ್ಮಾಪಕ: ಬುಡ್ಡಿದೀಪ ಸಿನಿಮಾ ಹೌಸ್, ಮಂಜುನಾಥ್ ಎನ್.
ನಿರ್ದೇಶಕ: ಮಂಜುನಾಥ್ ಎನ್.
• ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಇಂಡಿಯಾ v/s ಇಂಗ್ಲೆಂಡ್
ನಿರ್ಮಾಪಕ: ನಾಗತಿಹಳ್ಳಿ ಸಿನಿ ಕಂಬೈನ್ಸ್, ಶ್ರೀ ವೈ.ಎನ್.ಶಂಕರೇಗೌಡ
ನಿರ್ದೇಶಕ: ನಾಗತಿಹಳ್ಳಿ ಚಂದ್ರಶೇಖರ್
• ಅತ್ಯುತ್ತಮ ಮಕ್ಕಳ ಚಿತ್ರ: ಎಲ್ಲಿ ಆಡೋದು ನಾವು ಎಲ್ಲಿ ಆಡೋದು
ನಿರ್ಮಾಪಕ: ಎಸ್‌ಆರ್ ಎಂಟರ್‌ಪ್ರೈಸಸ್, ಶ್ರೀನಿವಾಸ್ ಡಿ.
ನಿರ್ದೇಶಕ: ಜಿ. ಅರುಣ್ ಕುಮಾರ್
• ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಗೋಪಾಲಗಾಂಧಿ
ನಿರ್ಮಾಪಕ: ರೇವಣ ಸಿದ್ದೇಶ್ವರ ಮೂವೀಸ್, ಎಸ್.ಅಶೋಕ್ ರಾವ್
ನಿರ್ದೇಶಕ: ನಾಗೇಶ್ ಎನ್.
• ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ಟ್ರಿಪಲ್ ತಲಾಕ್ (ಬ್ಯಾರಿ ಭಾಷೆ)
ನಿರ್ಮಾಪಕ: ಗುಲ್ವಾಡಿ ಟಾಕೀಸ್, ಯಾಕೂಬ್ ಖಾದರ್ ಗುಲ್ವಾಡಿ
ನಿರ್ದೇಶಕ: ಯಾಕೂಬ್ ಖಾದರ್ ಗುಲ್ವಾಡಿ
• ಅತ್ಯುತ್ತಮ ನಟ: ಕಿಚ್ಚ ಸುದೀಪ್ -ಚಿತ್ರ: ಪೈಲ್ಮಾನ್
• ಅತ್ಯುತ್ತಮ ನಟಿ: ಅನುಪಮಾ ಗೌಡ - ಚಿತ್ರ: ತ್ರಯಂಬಕಂ
•ಅತ್ಯುತ್ತಮ ಪೋಷಕ ನಟ: ತಬಲ ನಾಣಿ - ಚಿತ್ರ: ಕೆಮಿಸ್ಟ್ರಿ ಆಫ್ ಕರಿಯಪ್ಪ
• ಅತ್ಯುತ್ತಮ ಪೋಷಕ ನಟಿ: ಅನೂಷಾ ಕೃಷ್ಣ- ಚಿತ್ರ: ಬ್ರಾಹ್ಮಿ
• ಅತ್ಯುತ್ತಮ ಕತೆ: ಜಯಂತ್ ಕಾಯ್ಕಿಣಿ - ಚಿತ್ರ : ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ
• ಅತ್ಯುತ್ತಮ ಚಿತ್ರಕತೆ: ಡಾರ್ಲಿಂಗ್ ಕೃಷ್ಣ- ಚಿತ್ರ: ಲವ್ ಮಾಕ್‌ಟೇಲ್
• ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ-ಚಿತ್ರ: ಅಮೃತಮತಿ
• ಅತ್ಯುತ್ತಮ ಛಾಯಾಗ್ರಹಣ: ಜಿ.ಎಸ್. ಭಾಸ್ಕರ್- ಚಿತ್ರ: ಮೋಹನದಾಸ
• ಅತ್ಯುತ್ತಮ ಸಂಗೀತ ನಿರ್ದೇಶನ: ವಿ. ಹರಿಕೃಷ್ಣ- ಚಿತ್ರ: ಯಜಮಾನ
• ಅತ್ಯುತ್ತಮ ಸಂಕಲನ: ಜಿ.ಬಸವರಾಜ್ ಅರಸ್ (ಶಿವು)- ಚಿತ್ರ: ಝಾನ್ಸಿ ಐ.ಪಿ.ಎಸ್
• ಅತ್ಯುತ್ತಮ ಬಾಲ ನಟ: ಮಾಸ್ಟರ್ ಪ್ರೀತಂ- ಚಿತ್ರ: ಮಿಂಚುಹುಳ
• ಅತ್ಯುತ್ತಮ ಬಾಲ ನಟಿ: ಬೇಬಿ ವೈಷ್ಣವಿ ಅಡಿಗ- ಚಿತ್ರ: ಸುಗಂಧಿ
• ಅತ್ಯುತ್ತಮ ಕಲಾ ನಿರ್ದೇಶನ: ಹೊಸ್ಮನೆ ಮೂರ್ತಿ- ಚಿತ್ರ: ಮೋಹನದಾಸ
• ಅತ್ಯುತ್ತಮ ಗೀತ ರಚನೆ: ರಝಾಕ್ ಪುತ್ತೂರು- ಚಿತ್ರ: ಪೆನ್ಸಿಲ್ ಬಾಕ್ಸ್
• ಅತ್ಯುತ್ತಮ ಹಿನ್ನೆಲೆ ಗಾಯಕ: ರಘು ದೀಕ್ಷಿತ್- ಚಿತ್ರ : ಲವ್ ಮಾಕ್‌ಟೇಲ್
• ಅತ್ಯುತ್ತಮ ಹಿನ್ನೆಲೆ ಗಾಯಕಿ: ಜಯದೇವಿ ಜಿಂಗಮ ಶೆಟ್ಟಿ ಚಿತ್ರ : ರಾಗಭೈರವಿ
• ತೀರ್ಪುಗಾರರ ವಿಶೇಷ ಪ್ರಶಸ್ತಿನಿರ್ಮಾಪಕರು: ಪುಟ್ಟಣ್ಣ
ನಿರ್ಮಾಣ ಸಂಸ್ಥೆ: ಇಂಚರ
• ಪುಟ್ಟಣ್ಣ ಪ್ರೊಡಕ್ಷನ್ - ಚಿತ್ರ: ಅಮೃತಮತಿ
• ನಿರ್ಮಾಪಕರು: ಬಿ.ಎನ್.ಜಿ. ರಾಜ್
ನಿರ್ಮಾಣ ಸಂಸ್ಥೆ: ಬಾಲಾಜಿ ಚಿತ್ರ
ಚಿತ್ರ: ತಮಟೆ ನರಸಿಂಹಯ್ಯ
• ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಆರ್.ಗಂಗಾಧರ್- ಚಿತ್ರ: ಮಕ್ಕಡ್ ಮನಸ್
ಗುರುವಾರ, 23 ಜನವರಿ 2025
11:45 ಪೂರ್ವಾಹ್ನ
Daily PDF
2019ನೇ ಕರ್ನಾಟಕ ಚಲನಚಿತ್ರ ಪ್ರಶಸ್ತಿ : ಸುದೀಪ್, ಅನುಪಮ ಗೌಡ ಅತ್ಯುತ್ತಮ ನಟ, ನಟಿ ಗೌರವ
Authored by:
Jyoti Angadi