* ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಮಸೂದೆ- 2023'ಕ್ಕೆ 20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಿದ್ಯುತ ಚಾಲಿತ ವಾಹನಗಳಿಗೆ ತೆರಿಗೆ ರದ್ದತಿಯ ತಿದ್ದುಪಡಿಯೊಂದಿಗೆ ' ವಿಧಾನಸಭೆ ಡಿಸೆಂಬರ್ 13 ರಂದು ಮಸೂದೆಗೆ ಸದನ ಅಂಗೀಕಾರ ನೀಡಿತು.
* 1.5 ಟನ್‌ನಿಂದ 12 ಟನ್‌ವರೆಗಿನ ತೂಕದ ಹಾಗೂ 10 ಲಕ್ಷದಿಂದ ₹ 15 ಲಕ್ಷದವರೆಗಿನ ಮೋಟಾರ್ ಕ್ಯಾಬ್ ಮತ್ತು ಸರಕು ಸಾಗಣೆ ವಾಹನಗಳಿಗೆ ಜೀವಿತಾವಧಿ ತೆರಿಗೆ ಬದಲಿಗೆ ತ್ರೈಮಾಸಿಕ ತೆರಿಗೆ ಪಾವತಿ ಪದ್ಧತಿಯನ್ನು ಪುನಃ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಈ ಮಸೂದೆ ತರಲಾಗಿದೆ.
* 20 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ವಿದ್ಯುತ್ ಚಾಲಿತ ವಾಹನಗಳಿಗೆ ವಾಹನದ ಮೌಲ್ಯದ ಶೇಕಡ 10ರಷ್ಟು ತೆರಿಗೆ ವಿಧಿಸುವ ಪ್ರಸ್ತಾವ ಮಸೂದೆಯಲ್ಲಿತ್ತು. ಅದನ್ನು ಕೈಬಿಡುವಂತೆ ವಿರೋಧ ಪಕ್ಷಗಳ ಸದಸ್ಯರು ಆಗ್ರಹಿಸಿದರು. ಬೇಡಿಕೆಯನ್ನು ಒಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಿದ್ಯುತ್ ಚಾಲಿತ ಸರಕು ಸಾಗಣೆ ವಾಹನ ಮತ್ತು ಕ್ಯಾಬ್‌ಗಳಿಗೆ ವಾಹನಗಳಿಗೆ ತೆರಿಗೆ ವಿನಾಯ್ತಿ ನೀಡುವುದಾಗಿದೆ ಎಂದು ತಿಳಿಸಿದರು.
ಗುರುವಾರ, 14 ಡಿಸೆಂಬರ್ 2023
3:25 ಅಪರಾಹ್ನ
Daily PDF
20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಿದ್ಯುತ ವಾಹನಗಳಿಗೆ ತೆರಿಗೆ ರದ್ದು
Authored by:
Bhagya R K