* 16 ವಯಸ್ಸಿಗಿಂತ ಕೆಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಉಪಯೋಗಿಸದಂತೆ ನಿರ್ಬಂಧ ವಿಧಿಸುವುದಾಗಿ ಆಸ್ಟ್ರೇಲಿಯಾದ ಪ್ರಧಾನಿ ಆಂಟನಿ ಆಲ್ಬನೀಸ್ ಹೇಳಿದ್ದಾರೆ. ಈ ಕಾನೂನು ಜಗತ್ತಿಗೆ ದಾರಿ ದೀಪವಾಗಬಲ್ಲದು.
* ಯುವ ಸಮೂಹದ ಮಾನಸಿಕ ಆರೋಗ್ಯವು ಕುಸಿಯುತ್ತಿರುವುದರ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಆಂಟನಿ ಅವರು ಹೇಳಿದ್ದಾರೆ.
* 16 ವಯಸ್ಸಿಗಿಂತ ಕೆಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದರೆ ಅದಕ್ಕೆ ಸಂಭಂದಿಸಿದ ಜಾಲತಾಣ ವೇದಿಕೆಯೇ ಹೊಣೆಗಾರರು, ವಿವಿಧ ಕಂಪನಿಗಳು ಈ ಬಗ್ಗೆ ನಿಯಂತ್ರಣವನ್ನು ಜಾರಿಗೊಳಿಸಬೇಕು, ಇಲ್ಲದಿದ್ದರೆ ಭಾರಿ ದಂಡವನ್ನು ತೆರಬೇಕಾದೀತು ಎಂದು ಎಚ್ಚರಿಸಿದ್ದಾರೆ.
* ಮಕ್ಕಳಿಗೆ ಸಾಮಾಜಿಕ ಜಾಲತಾಣ ಹಾನಿಕಾರಕವಾಗಿದೆ. ಮಕ್ಕಳು ಸಾಕಷ್ಟು ಸಮಯವನ್ನು ಸಾಮಾಜಿಕ ಜಾಲತಾಣದಲ್ಲಿ ಕಳೆಯುತ್ತಿದ್ದಾರೆ. ಆದ್ದರಿಂದ ಇದಕ್ಕೆ ನಿಯಂತ್ರಣ ಹೇರಬೇಕು ಎಂದು ಅಂದುಕೊಂಡಿದ್ದೇನೆ. ಈ ತಿಂಗಳ ಕೊನೆಯಲ್ಲಿ ನಿಯಂತ್ರಣ ಜಾರಿಗೆ ಬರಲಿದೆ ಎಂದವರು ಹೇಳಿದ್ದಾರೆ.
* 'ಎಕ್ಸ್', ಟಿಕ್ ಟಾಕ್, ಇನ್ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ನಲ್ಲಿ ಈಗಾಗಲೇ ಖಾತೆ ಹೊಂದಿರುವ ಆಸ್ಟ್ರೇಲಿಯಾದ 16 ವರ್ಷದ ಒಳಗಿನ ಮಕ್ಕಳನ್ನು ವೇದಿಕೆಯಿಂದ ಹೇಗೆ ಹೊರಹಾಕಬೇಕು ಎನ್ನುವುದರ ಕುರುತು ಆಯಾ ವೇದಿಕೆಗಳು ದಾರಿ ಕಂಡುಕೊಳ್ಳಬೇಕಿದೆ ಎಂದರು.
16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧ
Published by Jyoti Angadi
08 ನವೆಂಬರ್ 2024