* ಮಧ್ಯಪ್ರದೇಶದ ಟ್ರ್ಯಾಕ್ ಅತ್ಲೀಟ್ ಕೆ.ಎಂ. ದೀಕ್ಷಾ ಲಾಸ್ ಏಂಜಲೀಸ್‌ನಲ್ಲಿ ಮೇ 11 ರಂದು (ಶನಿವಾರ) ನಡೆದ ಸೌಂಡ್ ರನ್ನಿಂಗ್ ಟ್ರ್ಯಾಕ್ ಫೆಸ್ಟಿವಲ್‌ನಲ್ಲಿ 1500 ಮೀ.ಓಟದಲ್ಲಿ 4ನಿಮಿಷ 04.78 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.
* ಅವಿನಾಶ್ ಸಬ್ಲ್ ಅವರು ಪುರುಷರ 5,000 ಮೀಟರ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ.
* 2021ರಲ್ಲಿ ವಾರಂಗಲ್‌ನಲ್ಲಿ ನಡೆದಿದ್ದ ನ್ಯಾಶನಲ್ ಓಪನ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಹರ್ಮಿಲನ್ ಬೈನ್ಸ್ ನಿರ್ಮಿಸಿರುವ ಹಿಂದಿನ ದಾಖಲೆ(4 ನಿಮಿಷ 05.39 ಸೆಕೆಂಡ್) ಮುರಿದರು.
* ಹರ್ಮಿಲನ್ ಬೈನ್ಸ್ ಅವರು 19 ವರ್ಷಗಳ ಹಿಂದೆ 2002ರಲ್ಲಿ ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಸುನೀತಾ ರಾಣಿ ಅವರು 4 ನಿಮಿಷ 06.03 ಸೆಕೆಂಡ್‌ನಲ್ಲಿ ಗುರಿ ತಲುಪಿ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದರು.
* ದೀಕ್ಷಾ 2023ರಲ್ಲಿ ಭುವನೇಶ್ವರದ ಕಳಿಂಗ ಸ್ಟೇಡಿಯಮ್‌ನಲ್ಲಿ ನಡೆದ ರಾಷ್ಟ್ರೀಯ ಅಂತರ್-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ 4:06.07 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ಜಯಿಸಿದ್ದರು.
ಮಂಗಳವಾರ, 14 ಮೇ 2024
10:58 ಪೂರ್ವಾಹ್ನ
Daily PDF
1500 ಮೀ.ಓಟದಲ್ಲಿ ರಾಷ್ಟ್ರೀಯ ದಾಖಲೆ ಬರೆದ ದೀಕ್ಷಾ
Authored by:
Bhagya R K