* ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯ ಅವರು ಅಹಮದಾಬಾದ್‌ನಲ್ಲಿ ನಡೆಯಲಿರುವ 11ನೇ ಏಷ್ಯನ್ ಅಕ್ವಾಟಿಕ್ಸ್ ಚಾಂಪಿಯನ್‌ಶಿಪ್ (ಸೆಪ್ಟೆಂಬರ್ 28 – ಅಕ್ಟೋಬರ್ 11) ಗೆ ಸಂಬಂಧಿಸಿದಂತೆ ‘ಜಲವೀರ’ ಮಸ್ಕಾಟ್ ಮತ್ತು ಲೋಗೋವನ್ನು ಬಿಡುಗಡೆ ಮಾಡಿದರು.
* ಈ ಸ್ಪರ್ಧೆ 2026ರ ಏಷ್ಯನ್ ಕ್ರೀಡಾಕೂಟಕ್ಕೆ ಅರ್ಹತಾ ಪಂದ್ಯವಾಗಿದ್ದು, ಭಾರತೀಯ ಈಜು ಫೆಡರೇಶನ್ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿತು.
* ಚಾಂಪಿಯನ್‌ಶಿಪ್ ಹೊಸದಾಗಿ ನಿರ್ಮಿಸಲಾದ ಓಲಿಂಪಿಕ್ ಮಾನದಂಡಗಳ ವೀರ ಸಾವರ್ಕರ್ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿದೆ.
* 30 ಕ್ಕೂ ಹೆಚ್ಚು ರಾಷ್ಟ್ರಗಳಿಂದ 1000 ಕ್ಕೂ ಹೆಚ್ಚು ಆಟಗಾರರು ಭಾಗವಹಿಸುವ ನಿರೀಕ್ಷೆ ಇದೆ.
* ಮನ್ಸುಖ್ ಮಾಂಡವಿಯ ಅವರು ಈ ಚಾಂಪಿಯನ್‌ಶಿಪ್ ಭಾರತೀಯ ಅಕ್ವಾಟಿಕ್ಸ್ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಲಿದ್ದು, ಭಾರತೀಯ ಈಜುಗಾರರಿಗೆ ಸ್ವದೇಶಿ ಪ್ರೇಕ್ಷಕರ ಮುಂದೆ ತಮ್ಮ ಪ್ರತಿಭೆ ತೋರಿಸಲು ಇದು ದೊಡ್ಡ ಅವಕಾಶ ಎಂದು ಹೇಳಿದರು.
11ನೇ ಏಷ್ಯನ್ ಅಕ್ವಾಟಿಕ್ಸ್ ಚಾಂಪಿಯನ್ಶಿಪ್ಗೆ ‘ಜಲವೀರ’ ಮಸ್ಕಾಟ್ ಮತ್ತು ಲೋಗೋ ಅನಾವರಣ
Published by Jyoti Angadi
06 ಸೆಪ್ಟೆಂಬರ್ 2025