* ಭಾರತದ ಅಥ್ಲೆಟ್ ಗುಲ್ಲೀರ್ ಸಿಂಗ್ ಅವರು ಕ್ಯಾಲಿಫೋರ್ನಿಯಾದಲ್ಲಿ ನಡೆದ ಪುರುಷರ 10 ಸಾವಿರ ಮೀಟರ್ ಓಟದಲ್ಲಿ 16 ವರ್ಷಗಳ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದು, ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
* ಪುರುಷರ 10 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ 25 ವರ್ಷದ ಗುಲ್ಲೀರ್ ಅವರು 27 ನಿಮಿಷ 41.81 ಸೆಕೆಂಟ್‌ನಲ್ಲಿ 10 ಸಾವಿರ ಗುರಿಯನ್ನು ತಲುಪಿದ್ದಾರೆ.
* ಈ ಹಿಂದೆ 2008ರಲ್ಲಿ ಭಾರತದ ಸುರೇಂದ್ರ ಸಿಂಗ್ (28 ನಿ.2.89 ಸೆ.) ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಗುಲ್ಲೀರ್ ಅವರ ಈ ಪ್ರಯತ್ನವು ಒಲಿಂಪಿಕ್ ಅರ್ಹತೆ ಗಳಿಸಲು ಸಾಕಾಗಲಿಲ್ಲ. ಪ್ಯಾರಿಸ್ ಕ್ರೀಡಾಕೂಟದ ಅರ್ಹತಾ ಸಮಯವನ್ನು (27 ನಿಮಿಷ) ತಲುಪಲು ಅವರಿಗೆ ಸಾಧ್ಯವಾಗಲಿಲ್ಲ.
* ಮಹಿಳೆಯರ 10 ಸಾವಿರ ಮೀ ಓಟದಲ್ಲಿ ಪಾರುಲ್ ಚೌದರಿ (32 ನೀ.08.ಸೆ ) 20 ಸ್ಥಾನದೊಂದಿಗೆ ನಿರಾಸೆ ಅನುಭವಿಸಿದರು. ಅವರಿಗೂ ಒಲಿಂಪಿಕ್ಸ್ ಅರ್ಹತೆ ಸಿಗಲಿಲ್ಲ.
ಸೋಮವಾರ, 18 ಮಾರ್ಚ್ 2024
4:23 ಅಪರಾಹ್ನ
Daily PDF
10 ಸಾವಿರ ಮೀ ಓಟ : ಗುಲ್ಲೀರ್ ರಾಷ್ಟ್ರೀಯ ದಾಖಲೆ
Authored by:
Akshata Halli