Loading..!

ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ 32 ವಿವಿಧ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree PG
Published by: Hanamant Katteppanavar | Date:21 ಡಿಸೆಂಬರ್ 2020
not found

ಬ್ಯಾಂಕ್ ಆಫ್ ಬರೋಡಾ ಒಂದು ಭಾರತೀಯ ಬಹುರಾಷ್ಟ್ರೀಯ, ಸಾರ್ವಜನಿಕ ವಲಯದ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಕಂಪನಿಯಾಗಿದ್ದು, ಇದು ಭಾರತದ ಮೂರನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ, ಪ್ರಸ್ತುತ ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ 32 ವಿಶೇಷ ಭದ್ರತಾ ಅಧಿಕಾರಿಗಳು ಮತ್ತು ಅಗ್ನಿಶಾಮಕ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪೂರ್ಣ ಸಮಯದ ಆಧಾರದ ಮೇಲೆ ಹುದ್ದೆಗೆ ಆಯ್ಕೆ ಮಾಡಲಾಗುವುದು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ 2020 ರ ಡಿಸೆಂಬರ್ 18 ಪ್ರಾರಂಭಗೊಂಡು  2021 ಜನವರಿ 08 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

* ಹುದ್ದೆಗಳ ವಿವರ :

- ವಿಶೇಷ ಭದ್ರತಾ ಅಧಿಕಾರಿಗಳು - 27 ಹುದ್ದೆಗಳು 

- ಅಗ್ನಿಶಾಮಕ ಅಧಿಕಾರಿ - 05 ಹುದ್ದೆಗಳು 

ಒಟ್ಟು ಹುದ್ದೆಗಳು - 32

No. of posts:  32

Comments