Loading..!

ಭಾರತೀಯ ರೈಲ್ವೆ ಇಲಾಖೆಯ ಅಸಿಸ್ಟೆಂಟ್ ಲೋಕೋ ಪೈಲಟ್(ALP) ಮತ್ತು ಟೆಕ್ನಿಷಿಯನ್ ಹುದ್ದೆಗಳ ಎರಡನೇ ಹಂತದ ಪರೀಕ್ಷೆ ಮುಂದೂಡಿಕೆ.
| Date:5 ಜನವರಿ 2019
Image not found
ಭಾರತೀಯ ರೈಲ್ವೆ ಇಲಾಖೆಯು ಮೊದಲ ಹಂತದ ಫಲಿತಾಂಶವನ್ನು ಈಗಾಗಲೇ ಎಲ್ಲ ರೈಲ್ವೆ ನೇಮಕಾತಿ ಮಂಡಳಿ(RRB)ಗಳ ವೆಬ್ ನಲ್ಲಿ ದಿನಾಂಕ 02-11-2018 ರಂದು ಪ್ರಕಟಿಸಲಾಗಿದ್ದು ಇದರ ಜತೆ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಅಭ್ಯರ್ಥಿಗಳು ಬರೆದ ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳನ್ನು ಒದಗಿಸಲಾಗಿತ್ತು. ಆದರೆ ಕೆಲ ಉತ್ತರಗಳು ತಪ್ಪಾಗಿರುವ ಕುರಿತು ಹಾಗೂ ಅನುವಾದ ಸರಿ ಇಲ್ಲದಿರುವ ಬಗ್ಗೆ ಅಭ್ಯರ್ಥಿಗಳು ದೂರಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಫಲಿತಾಂಶ ಪ್ರಕಟಿಸ ಪ್ರಕಟಿಸಲು ರೈಲ್ವೆಯು ನಿರ್ಧರಿಸಿದೆ.

ಭಾರತೀಯ ರೈಲ್ವೆ ಇಲಾಖೆಯು ಗ್ರೂಪ್ 'ಸಿ' ಯ ಅಸಿಸ್ಟೆಂಟ್ ಲೋಕೋ ಪೈಲಟ್ ಮತ್ತು ಟೆಕ್ನಿಷಿಯನ್ ಹುದ್ದೆಗಳ ನೇಮಕಕ್ಕೆ ನಡೆಸಿದ್ದ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾ ಪರಿಷ್ಕೃತ ಫಲಿತಾಂಶವನ್ನು ದಿನಾಂಕ 20-12-2018 ರಂದು ಪ್ರಕಟಿಸುವುದಾಗಿ ಇಲಾಖೆಯು ತಿಳಿಸಿದೆ.

ಎರಡನೇ ಹಂತದ ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಗಾಗಿ ಈ ಮೊದಲು ದಿನಾಂಕ ಡಿಸೆಂಬರ್ 24 ನ್ನು ನಿಗದಿಪಡಿಸಲಾಗಿತ್ತು ಆದರೆ ಪ್ರಸ್ತುತ ಈ ದಿನಾಂಕಗಳನ್ನು 21, 22 ಮತ್ತು 23 ನೇ ಜನವರಿ 2019 ಕ್ಕೆ ಮುಂದೂಡಿರುವುದಾಗಿ ಭಾರತೀಯ ರೈಲ್ವೆ ಇಲಾಖೆಯು ಪ್ರಕಟಣೆ ಹೊರಡಿಸಿದೆ. ಹಾಗಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪರೀಕ್ಷಾ ತಯಾರಿಗಾಗಿ ಸಾಕಷ್ಟು ಸಮಯ ದೊರೆತಂತಾಗಿದೆ.

ರಾಜ್ಯದಲ್ಲಿ ಒಟ್ಟು 3479 ಹುದ್ದೆಗಳಿವೆ 1:15 ಅನುಪಾತದ ಪ್ರಕಾರ ಅರ್ಹತೆ ನೀಡಿದ್ದರೆ 52,185 ಅಭ್ಯರ್ಥಿಗಳು ಎರಡನೇ ಹಂತದ ಪರೀಕ್ಷೆಗೆ ಆಯ್ಕೆಯಾಗಬೇಕಿತ್ತು, ಆದರೆ ಈಗ ಕೇವಲ 36,903 ಅಭ್ಯರ್ಥಿಗಳು ಎರಡನೇ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

Comments