Loading..!

KPSC ಯಿಂದ ಶೀಘ್ರದಲ್ಲೇ ಸಾವಿರಾರು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದೆ, ಯಾವ ಇಲಾಖೆ ಎಷ್ಟು ಹುದ್ದೆ..? ಈ ಕುರಿತು ಮಾಹಿತಿ ನಿಮಗಾಗಿ
| Date:26 ಆಗಸ್ಟ್ 2019
Image not found
ಕರ್ನಾಟಕ ಲೋಕಸೇವಾ ಆಯೋಗ ಸಾವಿರಾರು ವಿವಿಧ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಿದೆ. ಆಗಸ್ಟ್ 31 ರೊಳಗಾಗಿ ಕೆಲ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಗೊಳ್ಳುವ ಸಾಧ್ಯತೆಯಿದ್ದು, ಉಳಿದ ಹುದ್ದೆಗಳಿಗೆ ಸೆಪ್ಟೆಂಬರ್ 30ರೊಳಗೆ ಅಧಿಸೂಚನೆ ಪ್ರಕಟವಾಗಲಿದೆ, ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಸಿದ್ಧವಾಗಿ ಉತ್ತಮ ತಯಾರಿ ಆರಂಭಿಸಿ

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿನ 789 ಪ್ರಥಮ ದರ್ಜೆ ಸಹಾಯಕರು, 908 ದ್ವಿತೀಯ ದರ್ಜೆ ಸಹಾಯಕರು, 398 ಶೀಘ್ರಲಿಪಿಗಾರರು, 441 ಬೆರಳಚ್ಚುಗಾರರು ಸೇರಿದಂತೆ ಮೂರು ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಕೆಪಿಎಸ್‌ಸಿಯ ಪೂರ್ಣ ಪ್ರಮಾಣದ ಅಧ್ಯಕ್ಷರಾಗಿ ಷಡಕ್ಷರಿ ನೇಮಕಗೊಂಡಿದ್ದಾರೆ. ಆದ್ದರಿಂದ, ವಿಳಂಬವಾಗಿದ್ದ ವಿವಿಧ ಇಲಾಖೆಗಳ ನೇಮಕಾತಿಗಳಿಗೆ ಈಗ ಚಾಲನೆ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಈ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಶುಶ್ರೂಷಕರು, ಗ್ರಂಥ ಪಾಲಕರು, ಸಹಾಯಕ ಗ್ರಂಥಪಾಲಕ, ಕಿರಿಯ ಇಂಜಿನಿಯರ್, ಲೆಕ್ಕ ಸಹಾಯಕರು, ಡಾಟಾ ಎಂಟ್ರಿ ಆಪರೇಟರ್, ಮಾರಾಟ ಸಹಾಯಕರು ಸೇರಿದಂತೆ ವಿವಿಧ ಇಲಾಖೆಗಳ ಹುದ್ದೆಗಳ ಭರ್ತಿಗೆ ಅಧಿಸೂಚನೆ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಹೊರಬೀಳಲಿದೆ. ಯಾವ-ಯಾವ ಹುದ್ದೆ? ಇಲ್ಲಿದೆ ವಿವರ....

ಯಾವ-ಯಾವ ಇಲಾಖೆ ಮತ್ತು ಹುದ್ದೆಗಳೆಷ್ಟು...?

* ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ನಿರ್ದೇಶನಾಲಯದಲ್ಲಿನ ಶುಶ್ರೂಷಕರು 105 +14 (ಹೈಕ), ಫಾರ್ಮಸಿಸ್ಟ್ 68+12 (ಹೈಕ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

* ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ಗ್ರಂಥಪಾಲಕರು 13,ಸಹಾಯಕ ಗ್ರಂಥಪಾಲಕ 13 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಿರಿಯ ಇಂಜಿನಿಯರ್ 19+02 (ಹೈಕ), ಫಾರ್ಮಾಸಿಸ್ಟ್ 4, ಲ್ಯಾಬ್ ಟೆಕ್ನಿಷಿಯನ್ 18+2 (ಹೈಕ), ಸ್ಟಾಫ್ ನರ್ಸ್ 26+2( ಹೈಕ), ಹಿರಿಯ ಮಹಿಳಾ ಆರೋಗ್ಯ ಸಹಾಯಕರು/ಲೇಡಿ ಹೆಲ್ತ್ ವಿಸಿಟರ್ 22+2(ಹೈಕ), ಕಿರಿಯ ಆರೋಗ್ಯ ಪರಿವೀಕ್ಷಕರು 8 ಹುದ್ದೆಗಳಿವೆ.

ಇತರೆ ಇಲಾಖೆಗಳು :

* ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿನ ಗ್ರಂಥಾಲಯ ಸಹಾಯಕರು 1
* ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿನ ಲೆಕ್ಕ ಸಹಾಯಕರು 32, ಡಾಡಾ ಎಂಟ್ರಿ ಆಪರೇಟರ್ 10
* ಕೃಷಿ ಮಾರಾಟ ಇಲಾಖೆಯಲ್ಲಿನ ಮಾರುಕಟ್ಟೆ ಮೇಲ್ವಿಚಾರಕರು 6 (ಹೈಕ), ಮಾರಾಟ ಸಹಾಯಕರು 12 (ಹೈಕ)
* ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಗಣತಿದಾರರು 6, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಟೈಡ್ ವಾಚರ್ 1 ಹುದ್ದೆಗಳು.
* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ನಿಲಯ ಮೇಲ್ವಿಚಾರಕರು (ಪುರುಷ) 4, ನಿಲಯ ಮೇಲ್ವಿಚಾರಕರು (ಮಹಿಳೆ) 8
* ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿನ ಲೆಕ್ಕ ಸಹಾಯಕರು 18

ಸದ್ಯ ಆನ್‌ಲೈನ್‌ ಅರ್ಜಿ ಸ್ವೀಕೃತಿಗೆ ಹೊರಗುತ್ತಿಗೆ ಸಂಸ್ಥೆಯನ್ನು ನೇಮಕ ಮಾಡಿಕೊಳ್ಳುವ ಕಾರ್ಯ ನಡೆಯುತ್ತಿದೆ. ಬಹುತೇಕವಾಗಿ ಇದು ಅಂತಿಮ ಕೊಂಡಿದ್ದು, ಸೆಪ್ಟೆಂಬರ್‌ನಲ್ಲಿ ಮೂರಕ್ಕೂ ಹೆಚ್ಚು ಅಧಿಸೂಚನೆಗಳು ಪ್ರಕಟವಾಗಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಎಫ್‌ಡಿಎ, ಎಸ್‌ಡಿಎ ಮತ್ತು ಕೆಲ ಹುದ್ದೆಗಳ ನೇಮಕಕ್ಕೆ ಸೆಪ್ಟೆಂಬರ್‌ 30ರ ಒಳಗೆ ಅಧಿಸೂಚನೆ ಹೊರಡಿಸಲು ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಗಡುವು ವಿಧಿಸಲಾಗಿದೆ ಎಂದು ಕೆಪಿಎಸ್‌ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
KPSC ಯಿಂದ ಅದಿಸೂಚಿಸಲಾಗುವ FDA ಮತ್ತು SDA ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments