➤ ವಿಶ್ವದ ಅತಿದೊಡ್ಡ ಪುಸ್ತಕ ಮೇಳಗಳಲ್ಲಿ ಒಂದೆಂದು ಖ್ಯಾತಿ ಪಡೆದಿರುವ 'ಹೊಸದಿಲ್ಲಿ ವಿಶ್ವ ಪುಸ್ತಕ ಮೇಳ (NDWBF) 2026' ಜನವರಿ 10ರಿಂದ ದೇಶದ ರಾಜಧಾನಿಯ ಐತಿಹಾಸಿಕ ಭಾರತ್ ಮಂಟಪದಲ್ಲಿ ಅದ್ಧೂರಿಯಾಗಿ ಆರಂಭಗೊಂಡಿದೆ. ಜನವರಿ 18ರವರೆಗೆ ಒಟ್ಟು ಒಂಬತ್ತು ದಿನಗಳ ಕಾಲ ಈ ಸಾಹಿತ್ಯೋತ್ಸವ ನಡೆಯಲಿದ್ದು, ಪುಸ್ತಕ ಪ್ರೇಮಿಗಳಿಗೆ ಜ್ಞಾನದ ಹಬ್ಬವನ್ನು ಉಣಬಡಿಸಲಿದೆ. ಈ ವರ್ಷದ ಮೇಳದ ಕೇಂದ್ರ ವಿಷಯ (Theme) 'ಭಾರತೀಯ ಮಿಲಿಟರಿ ಇತಿಹಾಸ: ಶೌರ್ಯ ಮತ್ತು ಬುದ್ಧಿವಂತಿಕೆ. 
ಈ ಬಾರಿಯ 53ನೇ ಆವೃತ್ತಿಯ ಮೇಳವು ಹಲವು ಮೈಲಿಗಲ್ಲುಗಳಿಗೆ ಸಾಕ್ಷಿಯಾಗುತ್ತಿದೆ:
=> ಉಚಿತ ಪ್ರವೇಶ: ಮೇಳದ ಇತಿಹಾಸದಲ್ಲೇ ಮೊದಲ ಬಾರಿಗೆ ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಡಿಜಿಟಲ್ ಯುಗದಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸಲು ಕೇಂದ್ರ ಶಿಕ್ಷಣ ಸಚಿವಾಲಯ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
=> ಜಾಗತಿಕ ಭಾಗಿತ್ವ: 35ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿದ್ದು, 1,000ಕ್ಕೂ ಹೆಚ್ಚು ಪ್ರಕಾಶಕರು ತಮ್ಮ ಮಳಿಗೆಗಳನ್ನು ತೆರೆದಿದ್ದಾರೆ.
=> ವೈವಿಧ್ಯಮಯ ಮಳಿಗೆಗಳು: ಮೇಳದಲ್ಲಿ ಸುಮಾರು 3,000ಕ್ಕೂ ಅಧಿಕ ಮಳಿಗೆಗಳಿದ್ದು, ವಿವಿಧ ಭಾಷೆಗಳ ಕೋಟ್ಯಂತರ ಪುಸ್ತಕಗಳು ಲಭ್ಯವಿವೆ.
➤ ಪ್ರಮುಖ ಆಕರ್ಷಣೆ: ಭಾರತೀಯ ಮಿಲಿಟರಿ ಇತಿಹಾಸ: ಈ ವರ್ಷದ ಮೇಳದ ಕೇಂದ್ರ ವಿಷಯ (Theme) 'ಭಾರತೀಯ ಮಿಲಿಟರಿ ಇತಿಹಾಸ: ಶೌರ್ಯ ಮತ್ತು ಬುದ್ಧಿವಂತಿಕೆ @ 75' (Indian Military History: Valour & Wisdom @ 75).
=> ಸುಮಾರು 1,000 ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಿಸಲಾದ ವಿಶೇಷ ಪೆವಿಲಿಯನ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸಾಧನೆಗಳನ್ನು ಪ್ರದರ್ಶಿಸಲಾಗುತ್ತಿದೆ.
=> ಅರ್ಜುನ್ ಟ್ಯಾಂಕ್, ಐಎನ್ಎಸ್ ವಿಕ್ರಾಂತ್ ಮತ್ತು ತೇಜಸ್ ಯುದ್ಧ ವಿಮಾನಗಳ ಪ್ರತಿಕೃತಿಗಳು ಪ್ರಮುಖ ಆಕರ್ಷಣೆಯಾಗಿವೆ.
=> ಮಿಲಿಟರಿ ತಂತ್ರಜ್ಞಾನ ಮತ್ತು ಶೌರ್ಯ ಗಾಥೆಗಳ ಕುರಿತ 500ಕ್ಕೂ ಅಧಿಕ ಪುಸ್ತಕಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.
➤ ಅಂತಾರಾಷ್ಟ್ರೀಯ ಗೌರವ: ಈ ಬಾರಿಯ ಮೇಳದಲ್ಲಿ ಕತಾರ್ (Qatar) ದೇಶವು 'ಅತಿಥಿ ರಾಷ್ಟ್ರ' (Guest of Honour) ಆಗಿ ಭಾಗವಹಿಸುತ್ತಿದ್ದರೆ, ಸ್ಪೇನ್ (Spain) 'ಫೋಕಸ್ ಕಂಟ್ರಿ' ಆಗಿ ಗಮನ ಸೆಳೆಯುತ್ತಿದೆ. ಇದು ಭಾರತ ಮತ್ತು ಈ ದೇಶಗಳ ನಡುವಿನ ಸಾಂಸ್ಕೃತಿಕ ವಿನಿಮಯಕ್ಕೆ ಹೊಸ ವೇದಿಕೆ ಕಲ್ಪಿಸಿದೆ.
➤ ಡಿಜಿಟಲ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು:-
=> ರಾಷ್ಟ್ರೀಯ ಇ-ಪುಸ್ತಕಾಲಯ: ಓದುಗರಿಗೆ 6,000ಕ್ಕೂ ಹೆಚ್ಚು ಉಚಿತ ಇ-ಪುಸ್ತಕಗಳನ್ನು ಕ್ಯೂಆರ್ ಕೋಡ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.
=> ಮಕ್ಕಳ ಪೆವಿಲಿಯನ್ (Kidz Express): ಮಕ್ಕಳಿಗಾಗಿ ಕಥೆ ಹೇಳುವ ಕಾರ್ಯಕ್ರಮಗಳು, ಚಿತ್ರಕಲೆ ಮತ್ತು ಸೃಜನಾತ್ಮಕ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ.
=> ಸಾಂಸ್ಕೃತಿಕ ಸಂಜೆ: ಪ್ರತಿದಿನ ಸಂಜೆ ಖ್ಯಾತ ಕಲಾವಿದರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಬ್ಯಾಂಡ್ ತಂಡಗಳು ಪ್ರದರ್ಶನ ನೀಡಲಿವೆ.
➤ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಮೇಳವನ್ನು ಉದ್ಘಾಟಿಸಿದ್ದು, ದೇಶದ ಯುವಜನತೆಯನ್ನು ಪುಸ್ತಕಗಳ ಪ್ರಪಂಚಕ್ಕೆ ಸೆಳೆಯುವಲ್ಲಿ ಈ ಮೇಳವು ಮೈಲಿಗಲ್ಲಾಗಲಿದೆ ಎಂದು ಆಶಿಸಿದ್ದಾರೆ.