Job Description: ➤ ಉತ್ತರಾಖಂಡದ ಸಿಲ್ಕ್ಯಾರ (Silkyara) ಸುರಂಗ ಕುಸಿತದ ವೇಳೆ ಧೈರ್ಯ ಮತ್ತು ಸಾಹಸ ಮೆರೆದು 41 ಕಾರ್ಮಿಕರ ಜೀವ ಉಳಿಸಿದ 12 ರ‍್ಯಾಟ್-ಮೈನರ್‌ಗಳಿಗೆ (Rat Miners) ಕೇಂದ್ರ ಸರ್ಕಾರವು ಅತ್ಯುನ್ನತ ನಾಗರಿಕ ಸಾಹಸ ಪ್ರಶಸ್ತಿಯಾದ 'ಸರ್ವೋತ್ತಮ ಜೀವ ರಕ್ಷಾ ಪಥಕ' (Sarvottam Jeevan Raksha Padak) ನೀಡಿ ಗೌರವಿಸಿದೆ. ನವದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿಟಿನ್ ಗಡ್ಕರಿ ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ➤ ಸಿಲ್ಕ್ಯಾರ ಸುರಂಗ ರಕ್ಷಣಾ ಕಾರ್ಯಾಚರಣೆ: ನವೆಂಬರ್ 2023 ರಲ್ಲಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರ ಬಳಿ ನಿರ್ಮಾಣ ಹಂತದಲ್ಲಿದ್ದ 4.5 ಕಿ.ಮೀ ಉದ್ದದ ಸುರಂಗ ಕುಸಿದು 41 ಕಾರ್ಮಿಕರು ಸಿಲುಕಿಕೊಂಡಿದ್ದರು. ಬೃಹತ್ ಯಂತ್ರಗಳು (Auger Machines) ವಿಫಲವಾದಾಗ, ಕೊನೆಯ 12 ಮೀಟರ್‌ಗಳಷ್ಟು ಕಲ್ಲು, ಮಣ್ಣು ಮತ್ತು ಕಾಂಕ್ರೀಟ್ ಪ್ರಪಾತವನ್ನು ತೆರವುಗೊಳಿಸಲು ಈ 12 ಜನರ ರ‍್ಯಾಟ್-ಮೈನರ್ಸ್ ತಂಡವನ್ನು ನಿಯೋಜಿಸಲಾಯಿತು. ಕೇವಲ ಸಲಿಕೆ, ಸುತ್ತಿಗೆ ಹಾಗೂ ಡ್ರಿಲ್ಲಿಂಗ್ ಉಪಕರಣಗಳ ಸಹಾಯದಿಂದ 24 ಗಂಟೆಗಳ ಕಾಲ ಸತತವಾಗಿ ಶ್ರಮಿಸಿ 41 ಜನರ ಜೀವ ರಕ್ಷಿಸಲಾಯಿತು. ➤ ಜೀವ ರಕ್ಷಾ ಪಥಕ ಸರಣಿ ಪ್ರಶಸ್ತಿಗಳು: ಜಲಪಾತ/ನೀರಿನಲ್ಲಿ ಮುಳುಗುವುದು, ಅಗ್ನಿ ಅವಘಡ, ವಿದ್ಯುತ್ ಆಘಾತ, ಗಣಿ ದುರಂತ ಹಾಗೂ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಇತರರ ಜೀವ ಉಳಿಸಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ➤ ಮೂರು ಶ್ರೇಣಿಗಳು (Categories): ಸರ್ವೋತ್ತಮ ಜೀವ ರಕ್ಷಾ ಪಥಕ: ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಜೀವ ರಕ್ಷಿಸಿದ್ದಕ್ಕಾಗಿ (ಅತ್ಯುನ್ನತ): ₹2.00 ಲಕ್ಷ ಉತ್ತಮ ಜೀವ ರಕ್ಷಾ ಪಥಕ: ಅಪಾಯಕಾರಿ ಸನ್ನಿವೇಶದಲ್ಲಿ ಸಮಯಪ್ರಜ್ಞೆ ಮೆರೆದು ಜೀವ ರಕ್ಷಿಸಿದ್ದಕ್ಕಾಗಿ: ₹1.50 ಲಕ್ಷ ಜೀವ ರಕ್ಷಾ ಪಥಕ: ತೀವ್ರ ಗಾಯಗಳಾಗುವ ಅಪಾಯವಿದ್ದರೂ ಜೀವ ರಕ್ಷಿಸಿದ್ದಕ್ಕಾಗಿ: ₹1.00 ಲಕ್ಷ ➤ ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ: ಯಾವುದೇ ಕ್ಷೇತ್ರ ಅಥವಾ ಹಿನ್ನೆಲೆಯ ವ್ಯಕ್ತಿಗೆ ಈ ಪ್ರಶಸ್ತಿ ನೀಡಬಹುದು. ಸಶಸ್ತ್ರ ಪಡೆಗಳು, ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ನೀಡಬೇಕಾದರೆ, ಆ ಕಾರ್ಯವು ಅವರ ಸಾಮಾನ್ಯ ಕರ್ತವ್ಯದ ಮಿತಿಯನ್ನು ಮೀರಿದ ಸಾಹಸ (beyond the call of duty) ಆಗಿರಬೇಕು. ಪ್ರಶಸ್ತಿಗಳ ನಾಮನಿರ್ದೇಶನಗಳನ್ನು ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಶಿಫಾರಸು ಮಾಡುತ್ತವೆ. ಪ್ರಧಾನಮಂತ್ರಿ ಹಾಗೂ ಭಾರತದ ರಾಷ್ಟ್ರಪತಿಗಳು ಈ ಪ್ರಶಸ್ತಿಗಳನ್ನು ಅಂತಿಮವಾಗಿ ಅನುಮೋದಿಸುತ್ತಾರೆ.