ರವಿವಾರ, 05 ಜನವರಿ 2020
5:30 ಪೂರ್ವಾಹ್ನ
Daily PDF
ರಾಮನಗರ ಜಿಲ್ಲೆಯನ್ನು ನವ ಬೆಂಗಳೂರು ಎಂದು ಹೆಸರು ಬದಲಿಸಲು ಮುಂದಾದ ರಾಜ್ಯ ಸರ್ಕಾರ; ವಿದೇಶಿ ಬಂಡವಾಳ ಸೆಳೆಯಲು ಹೊಸ ತಂತ್ರ
Authored by:
Basavaraj Halli
ಬೆಂಗಳೂರು ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋ ಪಾಲಿಟನ್ ಸಿಟಿ. ಬಂಡವಾಳ ಹೂಡುವವರ ನೆಚ್ಚಿನ ತಾಣ. ಇದೇ ಕಾರಣಕ್ಕೆ ರಾಜಧಾನಿ ಇಂದು ಅಗತ್ಯಕ್ಕಿಂತ ವೇಗವಾಗಿಯೇ ಬೆಳೆಯುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ರಾಜಧಾನಿ ಬೆಂಗಳೂರಿನ ಕೂಗಳತೆಯ ದೂರದಲ್ಲೇ ಇರುವ ರಾಮನಗರ ಮಾತ್ರ ಇದಕ್ಕೆ ಅಪವಾದ.
ಇದೇ ಕಾರಣಕ್ಕೆ ರಾಜ್ಯ ಸರ್ಕಾರ ರಾಮನಗರ ಎಂಬ ಹೆಸರನ್ನು ಬದಲಾಯಿಸಿ ನವ ಬೆಂಗಳೂರು ಎಂದು ಮರ ನಾಮಕಾರಣ ಮಾಡಲು ಸದ್ದಿಲ್ಲದೆ ತಯಾರಿ ನಡೆಸಿದೆ. ಆ ಮೂಲಕ ಬೆಂಗಳೂರಿನಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿಸುವ ಜಾಗತಿಕ ಉದ್ಯಮಿಗಳನ್ನು ಜಿಲ್ಲೆಗೆ ಸೆಳೆಯುವ ತಂತ್ರ ಹೆಣೆಯುತ್ತಿದೆ ಎನ್ನಲಾಗುತ್ತಿದೆ. ಮರು ನಾಮಕರಣದೊಂದಿಗೆ ರಾಮನಗರಕ್ಕೂ ಹರಿದುಬರಲಿದೆ ಬಂಡವಾಳ;
ಇದು ಸಾಧ್ಯವಾದರೆ ಭವಿಷ್ಯದಲ್ಲಿ ರಾಮನಗರ ಜಿಲ್ಲೆಗೆ ದೇಶ-ವಿದೇಶಗಳಿಂದ ಬೃಹತ್ ಉದ್ಯಮಗಳ ನಿರ್ಮಾಣಕ್ಕೆ ಕೋಟ್ಯಾಂತರ ಹಣ ಹರಿದು ಬರಲಿದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಾಗಲಿದೆ. ಬೆಂಗಳೂರಿಗೆ ಪರ್ಯಾಯವಾಗಿ ಮತ್ತೊಂದು ಐಟಿ ಹಬ್ ಚಾಲ್ತಿಗೆ ಬರಲಿದೆ. ಜಿಲ್ಲೆಯ ಯುವಕರಿಗೆ ಉದ್ಯೋಗಾವಕಾಶ ಲಭಿಸಿದರೆ, ರೈತರ ಭೂಮಿಗೂ ಚಿನ್ನದ ಬೆಲೆ ಸಿಗಲಿದೆ. ಇದರ ಜೊತೆಗೆ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ ಎಂಬುದು ಈ ಯೋಜನೆಯ ತಾತ್ಪರ್ಯ.ವಿಪರ್ಯಾಸವೆಂದರೆ ರಾಮನಗರಕ್ಕೆ ಹೆಸರು ಬದಲಿಸುವ ಚಿಂತನೆ ಹೊಸದೇನಲ್ಲ.