ಕೇಂದ್ರ ಲೋಕಸೇವಾ ಆಯೋಗ (UPSC) ದಿಂದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Hanamant Katteppanavar | Date:5 ಜನವರಿ 2021
ಕೇಂದ್ರ ಲೋಕಸೇವಾ ಆಯೋಗ (UPSC) ಭಾರತದ ಸರ್ಕಾರದ ಪ್ರಮುಖ ನೇಮಕಾತಿಯ ಸಂಸ್ಥೆಯಾಗಿದ್ದು, ಪ್ರಸ್ತುತ ಖಾಲಿ ಇರುವ 400 ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 19 2021 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
* ಹುದ್ದೆಗಳ ವಿವರ :
- ರಾಷ್ಟ್ರೀಯ ರಕ್ಷಣಾ ಅಕಾಡೆಮಿ - 370 ಹುದ್ದೆಗಳು
- ನೇವಲ್ ಅಕಾಡೆಮಿ (10+2) - 30 ಹುದ್ದೆಗಳು
* ಪ್ರಮುಖ ದಿನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-01-2021
- ಶುಲ್ಕ ಪಾವತಿಗೆ ಕೊನೆಯ ದಿನಾಂಕ : 19-01-2021
- ಆನ್‌ಲೈನ್ ಅರ್ಜಿಯನ್ನು ಹಿಂತೆಗೆದುಕೊಳ್ಳುವ ದಿನಾಂಕ: 27-01-2021 ರಿಂದ 02-02-2021
- ಪರೀಕ್ಷೆಯ ದಿನಾಂಕ: 18-04-2021
- ಪರೀಕ್ಷೆಯ ಫಲಿತಾಂಶ ಘೋಷಣೆ : ಜೂನ್ 2021
- ಸಂದರ್ಶನದ ದಿನಾಂಕ: ಜುಲೈ, 2021 ರಿಂದ ಸೆಪ್ಟೆಂಬರ್, 2021
No. of posts: 400
Comments